ಬಾಬಾ ರಾಮ್‌ದೇವ್‌ ʻಪತಂಜಲಿʼ ಕಂಪನಿಗೆ ಸುಪ್ರೀಂ ಕೋರ್ಟ್‌ ತಾಕೀತು!

masthmagaa.com:

ಮಿಸ್‌ಲೀಡಿಂಗ್‌ ಆಡ್‌ ವಿಚಾರವಾಗಿ ಪತಂಜಲಿ ಕಂಪನಿ ವಿರುದ್ದ ಸುಪ್ರೀಂ ಕೋರ್ಟ್‌ ಮತ್ತೆ ಕಿಡಿಕಾರಿದೆ. ʻಪತಂಜಲಿ ಕಂಪನಿ ಪತ್ರಿಕೆಯಲ್ಲಿ ಸಾರ್ವಜನಿಕವಾಗಿ ಕ್ಷಮಾಪಣೆ ಕೇಳಬೇಕಿದ್ರೆ…. ಪತ್ರಿಕೆಯಲ್ಲಿ ಅದೆಷ್ಟು ದೊಡ್ಡ ಕಾಲಮ್‌ನಲ್ಲಿ ಪತಂಜಲಿ ಜಾಹೀರಾತು ನೀಡಿತ್ತೋ, ಅಷ್ಟೇ ದೊಡ್ಡ ಕಾಲಮ್‌ನಲ್ಲಿ ಕ್ಷಮಾಪಣೆ ಪ್ರಕಟವಾಗ್ಬೇಕು ಅಂತ ಕೋರ್ಟ್‌ ತಾಕೀತು ಮಾಡಿದೆ. ಬಾಬಾ ರಾಮ್‌ದೇವ್‌ ಪರವಾಗಿ ಬಂದ ಮುಕುಲ್‌ ರೋಹಟಗಿ ವಕೀಲರು, ʻಪತಂಜಲಿ ತನ್ನ ಕ್ಷಮಾಪಣೆಯನ್ನ ನ್ಯೂಸ್‌ಪೇಪರಲ್ಲಿ ಪಬ್ಲಿಷ್‌ ಮಾಡಿದೆʼ ಅಂತ ಹೇಳಿದ್ರು. ಇದನ್ನ ಖಂಡಿಸಿದ ಸುಪ್ರೀಂ ಕೋರ್ಟ್‌, ʻಕ್ಷಮಾಪಣೆಯನ್ನ ಯಾಕೆ ಕೇವಲ ನೆನ್ನೆ ಮಾತ್ರ ಪಬ್ಲಿಷ್‌ ಮಾಡಲಾಗಿದೆ? FMCG ಸಂಸ್ಥೆಗಳನ್ನ ದಾರಿತಪ್ಪಿಸೋ ಜಾಹೀರಾತು ನೀಡಿ… ದೇಶದ ನಾಗರಿಕರಿಗೆ ಮೋಸ ಮಾಡೋಕೆ ಬಿಡಲ್ಲ ನಾವು ಬಿಡಲ್ಲ. ಕೇಂದ್ರ ಸರ್ಕಾರ ಈ ಬಗ್ಗೆ ಗಮನ ಹರಿಸ್ಬೇಕುʼ ಅಂತೇಳಿದೆ. ಜೊತೆಗೆ ವಿಚಾರಣೆಯನ್ನ ಮುಂದೂಡಿ ಏಪ್ರಿಲ್‌ 30ಕ್ಕೆ ಡೇಟ್‌ ಫಿಕ್ಸ್‌ ಮಾಡಿದೆ. ಹಾಗೂ ಬಾಬಾ ರಾಮ್‌ದೇವ್‌ ಮತ್ತು ಬಾಲಕೃಷ್ಣ ಅವ್ರಿಗೆ ಆ ದಿನ ಕೋರ್ಟ್‌ಗೆ ಹಾಜರಾಗಲು ನಿರ್ದೇಶಿಸಿದೆ.

-masthmagaa.com

Contact Us for Advertisement

Leave a Reply