ವಿಚ್ಚೇದನ ಪಡೆಯಲು 6 ತಿಂಗಳು ಕಾಯುವ ಅಗತ್ಯವಿಲ್ಲ: ಸುಪ್ರೀಂಕೋರ್ಟ್‌

masthmagaa.com:

ಪರಸ್ಪರ ಒಪ್ಪಿಗೆಯಿದ್ದು ವಿಚ್ಛೇದನ ಪಡೆಯಲು ದಂಪತಿಗಳು 6 ತಿಂಗಳು ಕಡ್ಡಾಯವಾಗಿ ಕಾಯುವ ಅಗತ್ಯವಿಲ್ಲ ಅಂತ ಸುಪ್ರೀಂಕೋರ್ಟ್‌ ಮಹತ್ವದ ತೀರ್ಪು ನೀಡಿದೆ. ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆಯುವ ಪತಿ ಮತ್ತು ಪತ್ನಿಯನ್ನು ಕೌಟುಂಬಿಕ ನ್ಯಾಯಾಲಯಕ್ಕೆ ಕಳುಹಿಸದೆ ಪ್ರತ್ಯೇಕವಾಗಿ ವಾಸಿಸಲು ಅವಕಾಶ ನೀಡಬಹುದು. ಪರಸ್ಪರ ಒಪ್ಪಿಗೆ ಇದ್ದರೆ, ವಿಚ್ಛೇದನಕ್ಕೆ ಕಡ್ಡಾಯವಾಗಿ 6 ​​ತಿಂಗಳ ಕಾಯುವ ಅವಶ್ಯಕತೆ ಇಲ್ಲ. ಅಂತಹ ದಂಪತಿಗಳ ವಿವಾಹವನ್ನ ರದ್ಧುಗೊಳಿಸಬಹುದು ಎಂದು ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ನೇತೃತ್ವದ ಪೀಠ ಹೇಳಿದೆ. ಅಂದ್ಹಾಗೆ ಈ ಹಿಂದೆ ಕಾನೂನು ಪ್ರಕಾರ ವಿಚ್ಛೇದನ ಪಡೆಯುವ ದಂಪತಿಗಳು, ವಿಚ್ಛೇದನ ಪ್ರಕ್ರಿಯೆ ನಡೆಯುತ್ತಿದ್ದಂತೆ 6 ತಿಂಗಳು ಜತೆಯಾಗಿ ಒಂದೇ ಮನೆಯಲ್ಲಿ ಜೀವನ ನಡೆಸಬೇಕಿತ್ತು.

-masthmagaa.com

Contact Us for Advertisement

Leave a Reply