ಸುಪ್ರೀಂ–ಹೈಕೋರ್ಟ್ ನ್ಯಾಯಮೂರ್ತಿಗಳು ಆಸ್ತಿಯನ್ನ ಕಡ್ಡಾಯವಾಗಿ ಘೋಷಿಸಬೇಕು: ಸಂಸದೀಯ ಸಮಿತಿ ಶಿಫಾರಸು

masthmagaa.com:

ಸುಪ್ರೀಂಕೋರ್ಟ್‌ ಹಾಗೂ ಹೈಕೋರ್ಟ್‌ನ ನ್ಯಾಯಾಧೀಶರು ವಾರ್ಷಿಕವಾಗಿ ತಮ್ಮ ಆಸ್ತಿ ವಿವರವನ್ನ ಘೋಷಿಸುವ ಕಾನೂನನ್ನ ತರಲು ಸಂಸದೀಯ ಸಮಿತಿ ಉಭಯ ಸದನಕ್ಕೆ ಶಿಫಾರಸು ಮಾಡಿದೆ. ಇದರ ಜೊತೆಗೆ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು, ಕಾನೂನು ಮತ್ತು ನ್ಯಾಯ, ನೇಮಕಾತಿಗೆ ಸಂಬಂಧಿಸಿದ ವರದಿಯನ್ನು ಬಿಜೆಪಿ ರಾಜ್ಯಸಭಾ ಸದಸ್ಯ ಸುಶೀಲ್ ಕುಮಾರ್ ಮೋದಿ ಅವರ ಅಧ್ಯಕ್ಷತೆಯ ಸ್ಥಾಯಿ ಸಮಿತಿ ಸಲ್ಲಿಸಿದೆ. ಸಂಸದರು ಅಥವಾ ಶಾಸಕರಾಗಿ ಚುನಾವಣೆಗೆ ನಿಲ್ಲೋರ ಆಸ್ತಿಯನ್ನ ತಿಳಿದುಕೊಳ್ಳುವ ಹಕ್ಕು ಸಾರ್ವಜನಿಕರಿಗೆ ಇದೆ ಅಂತ ಸುಪ್ರೀಂಕೋರ್ಟ್ ಹೇಳಿತ್ತು. ಹಾಗೆ ಇನ್ಮುಂದೆ ಸರ್ಕಾರಿ ಮತ್ತು ಸಂವಿಧಾನಿಕ ಹುದ್ದೆಯಲ್ಲಿರುವವರ ಆಸ್ತಿ ವಿವರಗಳನ್ನ ಸಾರ್ವಜನಿಕರಿಗೆ ತಿಳಿಸುವ ಅಗತ್ಯವಿದೆ ಅಂತ ಸಮಿತಿ ಹೇಳಿದೆ.

-masthmagaa.com

Contact Us for Advertisement

Leave a Reply