ದೆಹಲಿ: ಐಸಿಸ್‌ನ ಮೋಸ್ಟ್‌ ವಾಂಟೆಡ್‌ ಉಗ್ರನ ಬಂಧನ

masthmagaa.com:

ದೆಹಲಿಯಲ್ಲಿ ನಡೆದ ಉಗ್ರರ ವಿರುದ್ಧ ಕಾರ್ಯಾಚರಣೆಯಲ್ಲಿ ಮೂವರು ಶಂಕಿತ ಐಸಿಸ್‌ ಉಗ್ರರನ್ನ NIA ಬಂಧಿಸಿದೆ. ಈ ಬಂಧಿತರಲ್ಲಿ ಮೋಸ್ಟ್‌ ವಾಂಟೆಡ್‌ ಭಯೋತ್ಪಾದಕ ಶಹನವಾಜ್ ಅಲಿಯಾಸ್ ಶಫಿ ಉಜ್ಜಮಾ ಕೂಡ ಸೇರಿದ್ದಾನೆ. ವೃತ್ತಿಯಲ್ಲಿ ಇಂಜಿನಿಯರ್ ಆಗಿರುವ ಶಹನವಾಜ್ ಪುಣೆ ಮಾಡ್ಯೂಲ್ ಪ್ರಕರಣದ ಆರೋಪಿಯಾಗಿದ್ದ. ಈತ ಮೂಲತಃ ದೆಹಲಿಯವನಾಗಿದ್ದು, ಈ ಹಿಂದೆ ಪುಣೆಯಲ್ಲಿ ಬಂದಿಸಲಾಗಿತ್ತು. ಆದರೆ ಪೊಲೀಸರಿಂದ ತಪ್ಪಿಸಿಕೊಂಡಿದ್ದ ಈತ ದೆಹಲಿಯ ಅಡಗುತಾಣವೊಂದರಲ್ಲಿ ತಲೆಮರೆಸಿಕೊಂಡಿದ್ದ. ಇದೀಗ ಆತನನ್ನು ಬಂಧಿಸಿದ್ದು, ವಿಚಾರಣೆ ನಡೆಸಲಾಗುತ್ತಿದೆ ಅಂತ ಪೊಲೀಸರು ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply