ಹಿಂದೂ ಅನ್ನೋದು ಧರ್ಮವಲ್ಲ, ಮೋಸ: ಸ್ವಾಮಿ ಪ್ರಸಾದ್‌ ಮೌರ್ಯ

masthmagaa.com:

ಹಿಂದೂ ಅನ್ನೋದು ಒಂದು ಧರ್ಮ ಅಲ್ಲ. ಅದು ʻಮೋಸʼ ಅಂತೇಳಿ ಸಮಾಜವಾದಿ ಪಾರ್ಟಿ ನಾಯಕ ಸ್ವಾಮಿ ಪ್ರಸಾದ್‌ ಮೌರ್ಯ ವಿವಾದ ಸೃಷ್ಟಿಸಿದ್ದಾರೆ. ʻ1955ರಲ್ಲಿ ಸುಪ್ರೀಂ ಕೋರ್ಟ್‌ ಆದೇಶ ನೀಡಿ, ಹಿಂದೂ ಧರ್ಮವಲ್ಲ. ಅದು ಜೀವನದ ವಿಧಾನ, ʻವೇ ಆಫ್‌ ಲೈಫ್‌ʼ ಅಂದಿದೆ. ಅದು 200ಕ್ಕೂ ಹೆಚ್ಚು ಧರ್ಮಗಳ ಒಕ್ಕೂಟ ಅಂತ ಆದೇಶ ನೀಡಿದೆʼ ಪ್ರಧಾನಿ ಮೋದಿ, ಸಚಿವ ನಿತಿನ್ ಗಡ್ಕರಿ‌ ಹಾಗೂ RSS ಚೀಫ್‌ ಮೋಹನ್‌ ಭಾಗವತ್‌ ಕೂಡ ಇದನ್ನೇ ಹೇಳಿದ್ದಾರೆ. ಅವರೆಲ್ಲಾ ಹೇಳಿದ್ರೆ ಯಾರ ಭಾವನೆಗಳಿಗೂ ಧಕ್ಕೆಯಾಗಲ್ಲ. ನಾನು ಹೇಳಿದ್ರೆ ಮಾತ್ರ ಧಕ್ಕೆಯಾಗುತ್ತೆʼ ಅಂತೇಳಿದ್ದಾರೆ. ಇದಕ್ಕೆ ರಿಪ್ಲೈ ನೀಡಿರೋ ಅವರದ್ದೇ ಪಕ್ಷದ ಅಖಿಲೇಶ್‌ ಯಾದವ್‌, ʻಪಕ್ಷದ ನಾಯಕರು ಜಾತಿ, ಧರ್ಮದ ವಿರುದ್ಧ ಕಮೆಂಟ್‌ ಮಾಡ್ಬಾರ್ದುʼ ಅಂತ ಸಜೆಶನ್‌ ನೀಡಿದ್ದಾರೆ.

-masthmagaa.com

Contact Us for Advertisement

Leave a Reply