ಸ್ವೀಡನ್‌ ಅಧಿಕೃತವಾಗಿ ನ್ಯಾಟೋಗೆ: ಬ್ಲಿಂಕನ್‌ ಉಪಸ್ಥಿತಿಯಲ್ಲಿ ಸೇರ್ಪಡೆ

masthmagaa.com:

ಮಹತ್ವದ ಬೆಳವಣಿಗೆಯಲ್ಲಿ ಯುರೋಪಿಯನ್‌ ದೇಶ ಸ್ವೀಡನ್‌ ಅಫೀಶಿಯಲ್ಲಾಗಿ ನ್ಯಾಟೋ ಒಕ್ಕೂಟಕ್ಕೆ ಸೇರಿದೆ. ಸ್ವೀಡನ್‌ ನ್ಯಾಟೋಗೆ ಸೇರೋಕೆ ಬೇಕಾದ ʻಇನ್‌ಸ್ಟ್ರುಮೆಂಟ್‌ ಆಫ್‌ ಅಕ್ಸೆಶನ್‌ʼ ಅಥವಾ ಪ್ರವೇಶ ನಿಬಂಧನೆಯನ್ನ ಅಮೆರಿಕದ ಸ್ಟೇಟ್‌ ಡಿಪಾರ್ಟ್‌ಮೆಂಟ್‌ಗೆ ಸಲ್ಲಿಸಲಾಗಿದೆ. ಸ್ವೀಡನ್ ಪ್ರಧಾನಿ ಉಲ್ಫ್‌ ಕ್ರಿಸ್ಟರ್‌ಸನ್‌ ಹಾಗೂ ಅಮೆರಿಕ ಸ್ಟೇಟ್‌ ಸೆಕ್ರೇಟರಿ ಅಂಟನಿ ಬ್ಲಿಂಕನ್‌ ಈ ಸಮಾರಂಭಕ್ಕೆ ಹಾಗೂ ಮಹತ್ವದ ವಿಚಾರಕ್ಕೆ ಸಾಕ್ಷಿಯಾಗಿದ್ದಾರೆ. ಈ ಬಗ್ಗೆ ಮಾತನಾಡಿರೋ ಆಂಟನಿ ಬ್ಲಿಂಕನ್‌, ಈಗ ನಮ್ಮ ನ್ಯಾಟೋ ಒಕ್ಕೂಟ ಇನ್ನೂ ಸ್ಟ್ರಾಂಗ್‌ ಆಗಿದೆ. ಇದು ಸ್ವೀಡನ್‌ಗೆ ಹಾಗೂ ನ್ಯಾಟೋ ಒಕ್ಕೂಟಕ್ಕೆ, ಟ್ರಾನ್ಸ್‌ಅಟ್ಲಾಂಟಿಕ್‌ ಸಂಬಂಧ್‌ ಅಂದ್ರೆ ಯುರೋಪ್‌- ಅಮೆರಿಕನ್‌ ಸಂಬಂಧಕ್ಕೆ ಐತಿಹಾಸಿಕ ಕ್ಷಣ ಅಂದಿದ್ದಾರೆ. ಇನ್ನು ಸ್ವೀಡನ್‌ ಹಾಗೂ ಕಳೆದ ವರ್ಷ ನ್ಯಾಟೋ ಸೇರಿದ ಫಿನ್‌ಲ್ಯಾಂಡ್‌ ತಮ್ಮ ಐತಿಹಾಸಿಕ ನ್ಯೂಟ್ರಾಲಿಟಿಯನ್ನ, ಅಂದ್ರೆ ಯಾವ ಬಣಕ್ಕೂ ಸೇರದೇ ಅಲಿಪ್ತವಾಗಿದ್ದನ್ನ ಈಗ ಬ್ರೇಕ್‌ ಮಾಡಿವೆ. ಹೀಗೆ ಒಂದೊಂದೇ ಯೂರೋಪಿಯನ್ ದೇಶಗಳು ನ್ಯಾಟೋ ಸೇರೋದನ್ನ ರಷ್ಯಾ ಮಾತ್ರ ಸಹಿಸ್ಕೊಳಲ್ಲ. ಸದ್ಯ ಈ ಬಗ್ಗೆ ರಷ್ಯಾ ಯಾವುದೇ ಹೇಳಿಕೆ ನೀಡಿಲ್ಲ.

-masthmagaa.com

Contact Us for Advertisement

Leave a Reply