ಹಂಗೇರಿ ಸಮ್ಮತಿಯ ಬಳಿಕ ನ್ಯಾಟೋ ಒಕ್ಕೂಟಕ್ಕೆ ಸ್ವೀಡನ್ ಎಂಟ್ರಿ!

masthmagaa.com:

ಕೊನೆಗೂ ನ್ಯಾಟೋ ಒಕ್ಕೂಟದ ಸದಸ್ಯ ರಾಷ್ಟ್ರವಾಗೊ ಸ್ವೀಡನ್‌ನ ಕನಸು ನನಸಾಗಿದೆ. ಸ್ವೀಡನ್‌ ಆಸೆಗೆ ಹಂಗೇರಿ ಅಂತೂ ಇಂತೂ ಗ್ರೀನ್‌ ಸಿಗ್ನಲ್‌ ಕೊಟ್ಟಿದೆ. ಈ ಹಿಂದೆ ಸ್ವೀಡನ್‌ ನ್ಯಾಟೋ ಒಕ್ಕೂಟದ ಸದಸ್ಯನಾಗಲು ಹಂಗೇರಿ ಪರ್ಮೀಶನ್‌ ಮಾತ್ರ ಬಾಕಿ ಇತ್ತು. ಫೆಬ್ರುವರಿ 26 ರಂದು ಹಂಗೇರಿ ಪಾರ್ಲಿಮೆಂಟ್‌ನಲ್ಲಿ ಈ ವಿಚಾರವಾಗಿ ಒಪ್ಪಿಗೆ ಸೂಚಿಸಲಾಗಿದೆ. ಈ ಮೂಲಕ ಸ್ವೀಡನ್ ಈ ಒಕ್ಕೂಟಕ್ಕೆ ಸೇರಿಸಿಕೊ‍ಳ್ಳಲು ಎಲ್ಲಾ ನ್ಯಾಟೊ ಸದಸ್ಯ ರಾಷ್ಟ್ರಗಳು ತಮ್ಮ ಪಾರ್ಲಿಮೆಂಟ್‌ನಲ್ಲಿ ಸಮ್ಮತಿ ನೀಡಿದಂತಾಗಿದೆ. ಇದರ ಬೆನ್ನಲ್ಲೇ ಸ್ವೀಡನ್‌ ಪ್ರತಿಕ್ರಿಯಿಸಿದೆ…ʻನಮಗೆ ಇದೊಂದು ಐತಿಹಾಸಿಕ ದಿನ.‌ ಯುರೋ-ಅಟ್ಲಾಂಟಿಕ್‌ ಭದ್ರತೆಯ ಜವಾಬ್ದಾರಿಯನ್ನ ಹೊರಲು ಸ್ವೀಡನ್‌ ಸಿದ್ದವಾಗಿದೆʼ ಅಂತ ಪ್ರಧಾನಿ ಉಲ್ಪ್ ಕ್ರಿಸ್ಟರ್ಸನ್ ಸಂತಸ ವ್ಯಕ್ತ ಪಡಿಸಿದ್ದಾರೆ.

-masthmagaa.com

Contact Us for Advertisement

Leave a Reply