ಹೊಸ ವರ್ಷಕ್ಕೆ ಸ್ವಿಗ್ಗಿ ಜೊಮಾಟೊಗಳಿಗೆ ಭಾರಿ ಆರ್ಡರ್‌ಗಳು!

masthmagaa.com:

ಹೊಸ ವರ್ಷದ ಹಿಂದಿನ ದಿನ, ಅಂದ್ರೆ ಡಿಸೆಂಬರ್‌ 31ರಂದು ಫುಡ್‌ ಡೆಲಿವರಿ ಪ್ಲಾಟ್‌ಫಾರ್ಮ್‌ಗಳಾದ ಜೊಮಾಟೊ, ಬ್ಲಿಂಕ್‌ ಇಟ್‌ ಹಾಗೂ ಸ್ವಿಗ್ಗಿಗಳು ದಾಖಲೆ ಪ್ರಮಾಣದ ಆರ್ಡರ್‌ಗಳನ್ನ ನಿರ್ವಹಿಸಿವೆ. ಜೆಪ್ಟೋ ಹಾಗೂ ಇನ್ಸ್ಟಾ ಮಾರ್ಟ್‌ ಸೇರಿ ಈ ಎಲ್ಲಾ ಕಂಪನಿಗಳ CEOಗಳು ಟ್ವಿಟರ್‌ನಲ್ಲಿ ತಮ್ಮ ತಮ್ಮ ಆರ್ಡರ್‌ಗಳ ವಾಲ್ಯೂಮನ್ನ ಕಳೆದ ವರ್ಷಕ್ಕೆ ಕಂಪೇರ್‌ ಮಾಡಿ ಪೋಸ್ಟ್‌ ಮಾಡಿದ್ದಾರೆ. ಜೊಮಾಟೊ CEO ದೀಪೆಂದರ್‌ ಗೋಯಲ್‌ ʻಈ ವರ್ಷದ ಆರ್ಡರ್‌ಗಳು 2015 ರಿಂದ 2020ರ ವರೆಗಿನ ನ್ಯೂ ಇಯರ್‌ ಈವ್‌ಗಳ ಒಟ್ಟಾರೆ ಆರ್ಡರ್‌ಗಳಿಗಿಂತ ಹೆಚ್ಚುʼ ಅಂತ Xನಲ್ಲಿ ಪೋಸ್ಟ್‌ ಮಾಡಿದ್ದಾರೆ. ರಾತ್ರಿ 8 ಗಂಟೆ ಸುಮಾರಿಗೆ ಪ್ರತಿ ಸೆಕೆಂಡ್‌ಗೆ 140 ಆರ್ಡರ್‌ಗಳು ಬಿದ್ದಿವೆ ಅಂತ ಗೋಯಲ್‌ ಮಾಹಿತಿ ನೀಡಿದ್ದಾರೆ. ಜೊಮಾಟೊದ 3.2 ಲಕ್ಷ ಡೆಲಿವರಿ ಪಾರ್ಟರ್‌ಗಳಿಗೆ, ಗ್ರಾಹಕರು ಹೊಸ ವರ್ಷದ ಜೋಷ್‌ನಲ್ಲಿ 97 ಲಕ್ಷ ರೂಪಾಯಿ ಟಿಪ್ಸ್‌ ನೀಡಿದ್ದಾರೆ. ಇತರ ಪ್ಲಾಟ್‌ಫಾರ್ಮ್‌ಗಳಲ್ಲೂ ಇಂತದ್ದೇ ಕತೆಗಳು ವರದಿಯಾಗಿವೆ.

-masthmagaa.com

Contact Us for Advertisement

Leave a Reply