ಬುರ್ಕಾ ಬ್ಯಾನ್‌ ಮಾಡಿದ ಸ್ವಿಜರ್‌ಲ್ಯಾಂಡ್‌!

masthmagaa.com:

ಹಿಜಾಬ್‌ ಧರಿಸದ ಹಾಗೂ ಅವರನ್ನ ಬೆಂಬಲಿಸುವ ಮಹಿಳೆಯರಿಗೆ ದಂಡ ವಿಧಿಸುವ ಮಸೂದೆಗೆ ಇರಾನ್‌ ಸಂಸತ್ತು ಅನುಮೋದನೆ ನೀಡಿದೆ. ಈ ಮಸೂದೆಯ ಪ್ರಕಾರ ಕಡ್ಡಾಯವಾಗಿ ಹಿಜಾಬ್‌ ಧರಿಸದ ಮಹಿಳೆಯರಿಗೆ ಶಿಕ್ಷೆ ವಿಧಿಸಲಾಗುತ್ತೆ. ಜೊತೆಗೆ ಹಿಜಾಬ್‌ ವಿರೋಧಿ ಪ್ರತಿಭಟನೆಗಳನ್ನ ಸಂಘಟಿಸುವವರಿಗೆ ಸುಮಾರು 10 ವರ್ಷಗಳರೆಗೆ ಶಿಕ್ಷೆ ವಿಧಿಸಲಾಗುತ್ತೆ ಅಂತ ಮಸೂದೆಯಲ್ಲಿ ಹೇಳಲಾಗಿದೆ. ಅಂದ್ಹಾಗೆ ಕಳೆದ ವರ್ಷ ಹಿಜಾಬ್‌ ಹಾಕದೆ ನಿಯಮ ಉಲ್ಲಂಘಿಸಿದ್ದಕ್ಕಾಗಿ ಮಹ್ಸಾ ಅಮಿನಿ ಅನ್ನೊ ವಿದ್ಯಾರ್ಥಿನಿಯೊಬ್ಬರು ಪೊಲೀಸ್‌ ಕಸ್ಟಡಿಯಲ್ಲಿರುವಾಗ ಮೃತಪಟ್ಟಿದ್ದರು. ಇದಾದ ಬಳಿಕ ಇರಾನ್‌ನಾದ್ಯಂತ ಹಿಜಾಬ್‌ ವಿರೋಧಿ ಪ್ರತಿಭಟನೆಗಳು ಭುಗಿಲೆದ್ದಿದ್ದವು. ಇತ್ತ ಬುರ್ಕಾ ವಿರೋಧಿ ಮಸೂದೆಗೆ ಸ್ವಿಜರ್‌ಲ್ಯಾಂಡ್‌ ಸಂಸತ್ತು ಅನುಮೋದನೆ ನೀಡಿದೆ. ಈ ಮಸೂದೆ ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರು ಬುರ್ಕಾ ಹಾಕೋದನ್ನ ನಿರ್ಬಂಧಿಸುತ್ತದೆ. ಅಂದ್ಹಾಗೆ ಎರಡು ವರ್ಷಗಳ ಹಿಂದೆ ಸ್ವಿಜರ್‌ಲ್ಯಾಂಡ್‌ನಾದ್ಯಂತ ಜನಾಭಿಪ್ರಾಯ ಸಂಗ್ರಹಿಸಿ ಈ ಮಸೂದೆಯನ್ನ ಅಂಗೀಕರಿಸಲಾಗಿದೆ.

-masthmagaa.com

Contact Us for Advertisement

Leave a Reply