ತೈವಾನ್‌ನಲ್ಲಿ ಮತ್ತೆ ಸರಣಿ ಭೂಕಂಪ: ಗರಿಷ್ಠ 6.3 ರಷ್ಟು ತೀವ್ರತೆ ದಾಖಲು!

masthmagaa.com:

ದ್ವೀಪ ಪ್ರದೇಶ ತೈವಾನ್‌ನಲ್ಲಿ ಮತ್ತೆ ಭೂಕಂಪ ಸಂಭವಿಸಿದೆ….ಕೇವಲ 20 ದಿನಗಳ ಅಂತರದಲ್ಲಿ ಇದು ಎರಡನೇ ಭೂಕಂಪವಾಗಿದೆ. ರಿಕ್ಟರ್‌ ಮಾಪಕದಲ್ಲಿ ಗರಿಷ್ಠ 6.3ರ ತೀವ್ರತೆ ದಾಖಲಾಗಿದ್ದು, ರಾಜಧಾನಿ ತೈಪೆ ಸೇರಿದಂತೆ ಅಲ್ಲಲ್ಲಿ ಅಲ್ಪ ಪ್ರಮಾಣದ ಹಾನಿಗಳಾಗಿವೆ. ಅದೃಷ್ಠವಶಾತ್‌ ಯಾವುದೇ ಸಾವು-ನೋವುಗಳು ವರದಿಯಾಗಿಲ್ಲ. ಏಪ್ರಿಲ್‌ 22ರ ಸಂಜೆ 5.5 ತೀವ್ರತೆಯಲ್ಲಿ ಮೊದಲ ಬಾರಿ ಭೂಕಂಪ ಸಂಭವಿಸಿದ್ರೆ, ಏಪ್ರಿಲ್‌ 23ರ ಬೆಳಗಿನ ಜಾವ ಮತ್ತೆರಡು ಸಲ ಭೂಕಂಪ ಸಂಭವಿಸಿದೆ ಅಂತ ತೈವಾನ್‌ ಸರ್ಕಾರ ಹೇಳಿದೆ. ಅಂದ್ಹಾಗೆ ಏಪ್ರಿಲ್ 3 ರಂದು ತೈವಾನ್‌ನಲ್ಲಿ ಸಂಭವಿಸಿದ ಭೂಕಂಪದಲ್ಲಿ ಕನಿಷ್ಠ 14 ಜನ ಮೃತಪಟ್ಟಿದ್ರು.

-masthmagaa.com

Contact Us for Advertisement

Leave a Reply