ಹೆಚ್ಚಾಯ್ತು ಚೀನಾ ಬೇಹುಗಾರಿಕೆ! ತೈವಾನ್‌ನಲ್ಲಿ ಕಳವಳ!

masthmagaa.com:

ತೈವಾನ್‌ ಮೇಲೆ ಕಣ್ಣಿಟ್ಟಿರೋ ಚೀನಾ ಹಿಂದಿನಿಂದಲೂ ಈ ದೇಶದ ಮೇಲೆ ತನ್ನ ಗೂಢಚರ್ಯೆ ಕೆಲಸವನ್ನ ಮಾಡ್ತಲೇ ಬಂದಿದೆ. ಇದೀಗ ಈ ಬಗ್ಗೆ ತೈವಾನ್‌ನ ರಕ್ಷಣಾ ಸಚಿವ ಚಿಯು ಕುವೊ-ಚೆಂಗ್‌ ಕಳವಳ ವ್ಯಕ್ತ ಪಡಿಸಿದ್ದಾರೆ. ʻಬೆಹುಗಾರಿಕೆ ನಡೆಸೋಕೆ ಚೀನಾದ ಇಂಟೆಲಿಜೆನ್ಸ್‌ ಸರ್ವೀಸ್‌ ತೈವಾನ್‌ ಜನರನ್ನ ನೇಮಿಸ್ಕೊಳ್ಳೋದು ಜಾಸ್ತಿಯಾಗ್ಬಿಟ್ಟಿದೆʼ ಅಂತ ಹೇಳಿದ್ದಾರೆ. ಇದಕ್ಕೆ ಪುಷ್ಠಿ ನೀಡೋಕೆ ಇತ್ತೀಚೆಗಷ್ಟೆ ತೈವಾನ್‌ ಕೋರ್ಟ್‌ನಲ್ಲಿ ಈ ಕುರಿತು ಕೆಲ ವಿಚಾರಣೆಗಳು ನಡೆದಿದ್ವು. ತೈವಾನ್‌ನ ನಿವೃತ್ತ ಯೋಧರು ಚೀನಾ ಜೊತೆ, ಅದ್ರ ಕುತಂತ್ರದ ಜೊತೆ ಕೈ ಮಿಲಾಯಿಸಿದ ಅದೆಷ್ಟೋ ಕೇಸ್‌ಗಳು ತೈವಾನ್‌ ಕೋರ್ಟ್‌ನಲ್ಲಿ ಚರ್ಚೆ ಆಗಿದ್ವು. ಆದ್ರಿಂದ ಇದೀಗ ತೈವಾನ್‌ನ ನೂತನ ಸರ್ಕಾರ ಎಚ್ಚೆತ್ತುಕೊಂಡಿದೆ. ಸೂಕ್ತ ಕ್ರಮ ತೆಗೆದುಕೊಳ್ಳೋ ಬಗ್ಗೆ ಯೋಚಿಸ್ತಿದೆ ಎನ್ನಲಾಗ್ತಿದೆ.

-masthmagaa.com

Contact Us for Advertisement

Leave a Reply