ಜಿ20 ಶೃಂಗಸಭೆ: ಬೈಡನ್-ಜಿನ್‌ಪಿಂಗ್‌ ಮಾತುಕತೆ, ಉಭಯ ನಾಉಕರು ಚರ್ಚಿಸಿದ್ದೇನು?

masthmagaa.com:

ಜಿ20 ರಾಷ್ಟ್ರಗಳ ಸಭೆಯಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಹಾಗೂ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ಮಾತುಕತೆ ನಡೆಸಿದ್ದಾರೆ. ತೈವಾನ್‌ ವಿಷಯದಲ್ಲಿ ಚೀನಾದ ʻಪಾಲಿಸಿʼ ಬಗ್ಗೆ ಬೈಡೆನ್‌ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ತೈವಾನ್‌ ಸ್ಟ್ರೇಟ್‌ ಹಾಗೂ ಗಡಿ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆ ವಿಷಯಕ್ಕೆ ಹೆಚ್ಚಿನ ಮಹತ್ವ ನೀಡಿದ್ದಾರೆ. ಇತ್ತ ಚೀನಾ ಕೂಡ ತೈವಾನ್‌ ವಿಷಯವಾಗಿ, ಚೀನಾ-ಅಮೆರಿಕ ಸಂಬಂಧಗಳು ರೆಡ್‌ಲೈನ್‌ನ್ನ ಕ್ರಾಸ್‌ ಮಾಡಬಾರ್ದು ಅಂತ ಅಮೆರಿಕಕ್ಕೆ ಎಚ್ಚರಿಕೆ ನೀಡಿದ್ದಾರೆ. ಇದರ ಜೊತೆಗೆ ತೈವಾನ್‌ಗೆ ಅಮೆರಿಕದ ಸ್ಪೀಕರ್‌ ನ್ಯಾನ್ಸಿ ಪೆಲೋಸಿ ಭೇಟಿ, ಹವಾಮಾನ ಬದಲಾವಣೆ, ಸೇನಾಭ್ಯಾಸ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ. ಉಭಯ ನಾಯಕರು ಸ್ಟ್ರಾಟಜಿಕ್‌ ಮಾತುಕತೆಗಳನ್ನ ಮುಂದುವರೆಸೋಕೆ ಹಾಗೂ ರೆಗ್ಯುಲರ್‌ ಆಗಿ ಭೇಟಿ ಆಗೋಕೆ ಒಪ್ಪಿದ್ದಾರೆ ಅಂತ ಹೇಳಲಾಗಿದೆ.

-masthmagaa.com

Contact Us for Advertisement

Leave a Reply