ತೈವಾನ್‌ ನಿಯಂತ್ರಿತ ಕಿನ್ಮೆನ್‌ ದ್ವೀಪಕ್ಕೆ ಎಂಟ್ರಿ ಕೊಟ್ಟ ಚೀನಾ!

masthmagaa.com:

ತೈವಾನ್‌ ಸಮುದ್ರಮಾರ್ಗದ ಮೇಲೆ ಕಣ್ಣಿಡೋಕೆ ಚೀನಾ ಪದೇ ಪದೇ ಏನಾದ್ರೊಂದು ಕುತಂತ್ರ ಹೂಡ್ತಾ ತೈವಾನ್‌ಗೆ ಸಮಸ್ಯೆ ನೀಡ್ತಾನೇ ಇರುತ್ತೆ. ಇದೀಗ ತೈವಾನ್‌ ನಿಯಂತ್ರಿತ ಕಿನ್ಮೆನ್‌ ದ್ವೀಪಕ್ಕೆ ಚೀನಾ ಎಂಟ್ರಿ ಕೊಟ್ಬಿಟ್ಟಿದೆ. ನಾಲ್ಕು ಚೀನಾ ಕೋಸ್ಟ್‌ ಗಾರ್ಡ್‌ ಬೋಟ್‌ಗಳು ಮಾರ್ಚ್‌ 16ರಂದು ಈ ಕಿನ್ಮೆನ್‌ ದ್ವೀಪ ಪ್ರದೇಶಕ್ಕೆ ನುಗ್ಗಿವೆ ಅಂತ ತೈವಾನ್‌ ಆರೋಪ ಮಾಡಿದೆ. ಅಲ್ದೆ ವಿಚಾರ ಗೊತ್ತಾದ ಕೂಡಲೇ ಚೀನಾಗೆ ವಾರ್ನಿಂಗ್‌ ಕೊಟ್ಟೀದ್ದೀವಿ ಅಂತ ತೈವಾನ ಹೇಳಿದೆ. ʻನೀವು ನಮ್ಮ ದೇಶದ ನಿರ್ಬಂಧಿತ ಪ್ರದೇಶಕ್ಕೆ ಪ್ರವೇಶ ಮಾಡಿದ್ದೀರಿ…ಈ ಕೂಡಲೇ ವಾಪಾಸ್‌ ಹೋಗಿʼ ಅಂತ ಚೀನಾಗೆ ತಾಕೀತು ಮಾಡಿದ್ದೇವೆ ಅಂತ ತೈವಾನ್‌ ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply