ತೈವಾನ್‌ನಲ್ಲಿ ಹಾರಾಟ ನಡೆಸಿದ 21 ಚೈನಿಸ್‌ ಮಿಲಟರಿ ಏರ್‌ಕ್ರಾಫ್ಟ್‌ಗಳು!

masthmagaa.com:

ತೈವಾನ್‌ ನಮ್ಮ ದೇಶದ ಭಾಗ ಅಂತೇಳಿ ಪದೇ ಪದೇ ಕಾಟ ಕೊಡೊ ಚೀನಾ ಈಗ ಮತ್ತೆ ತನ್ನ ಪುಂಡಾಟ ಶುರು ಹಚ್ಕೊಂಡಿದೆ. ಇದೀಗ ಚೀನಾದ 21 ಮಿಲಟರಿ ಏರ್‌ಕ್ರಾಫ್ಟ್‌ಗಳು ತೈವಾನ್‌ ಪ್ರದೇಶದಲ್ಲಿ ಹಾರಾಟ ನಡೆಸಿವೆ. ಹೀಗಂತ ತೈವಾನ್‌ನ ರಕ್ಷಣಾ ಸಚಿವಾಲಯ ಹೇಳಿದೆ. 21ರ ಪೈಕಿ 17 ಏರ್‌ಕ್ರಾಫ್ಟ್‌ಗಳು ಸ್ಥಳೀಯ ಕಾಲಮಾನ ಬೆಳಿಗ್ಗೆ 8ಗಂಟೆಗೆ ನಮ್ಮ ದೇಶದ ಉತ್ತರ, ನೈರುತ್ಯ ಹಾಗೂ ಮಧ್ಯ ಭಾಗದಲ್ಲಿ ಹಾರಾಟ ನಡೆಸಿದೆ ಅಂತ ತೈವಾನ್‌ ಹೇಳಿದೆ. ಅಲ್ದೇ ಈ ಬೆಳವಣಿಗೆಯನ್ನ ತೈವಾನ್‌ ಆರ್ಮಿ ಮಾನಿಟರ್‌ ಮಾಡ್ತಿವೆ ಅಂತ ತೈವಾನ್‌ ಸರ್ಕಾರ ಹೇಳಿದೆ.

-masthmagaa.com

Contact Us for Advertisement

Leave a Reply