ಯುಧ್ದ ಮಾಡುವುದು ನಮ್ಮ ಆಯ್ಕೆಯಲ್ಲ: ತೈವಾನ್‌!

masthmagaa.com:

ತೈವಾನ್‌ ಬಿಕ್ಕಟ್ಟು ಪರಿಹರಿಸಲು ಸೇನೆ ಬಳಸಲು ಸಿದ್ಧ ಅಂತ ಹೇಳಿದ್ದ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ಗೆ ತೈವಾನ್‌ ತಿರುಗೇಟು ನೀಡಿದೆ. ತೈವಾನ್‌ ಸ್ಥಾನ ಸ್ಥಿರವಾಗಿರುತ್ತೆ, ನಮ್ಮ ದೇಶದ ಸಾರ್ವಭೌಮತ್ವವನ್ನ ಕಾಪಾಡಿಕೊಳ್ತೇವೆ. ಯಾವುದೇ ಕಾರಣಕ್ಕೂ ದೇಶದ ಪ್ರಜಾಪ್ರಭುತ್ವ ಮತ್ತು ಸ್ವಾತಂತ್ರ್ಯದ ವಿಷಯದಲ್ಲಿ ರಾಜಿಮಾಡಿಕೊಳ್ಳಲ್ಲ ಅಂತ ತೈವಾನ್‌ ಸರ್ಕಾರ ಹೇಳಿದೆ. ಜೊತೆಗೆ ಎರಡು ದೇಶಗಳಿಗೆ ಯುದ್ಧ ಆಯ್ಕೆಯಲ್ಲ ಅಂತಾನೂ ಹೇಳಿದೆ. ಅಂದ್ಹಾಗೆ ನೆನ್ನೆ ನಡೆದ ಕಮ್ಯುನಿಸ್ಟ್‌ ಪಾರ್ಟಿ ಸಭೆಯಲ್ಲಿ ಜಿನ್‌ಪಿಂಗ್, ತೈವಾನ್‌ ಬಿಕ್ಕಟ್ಟನ್ನು ಬಗೆಹರಿಸೊಕೊಳ್ಳೋದು ಚೀನಾದ ಜನತೆಗೆ ಬಿಟ್ಟಿದ್ದು. ಸೇನೆಯನ್ನು ಬಳಸಿ ತೈವಾನ್‌ನ್ನು ವಶಪಡಿಸಿಕೊಳ್ಳೋಕು ಚೀನಾ ಹಿಂದೇಟು ಹಾಕಲ್ಲ ಅಂತ ಹೇಳಿದ್ದರು.

-masthmagaa.com

Contact Us for Advertisement

Leave a Reply