ಪ್ರೀತಿಯ ಪ್ರತೀಕವಾದ ತಾಜ್‌ ಮಹಲ್‌ಗೂ ತೆರಿಗೆ ಬಿಸಿ! ಏಷ್ಟಿದೆ ಬಾಕಿ?

masthmagaa.com:

ವಿಶ್ವದ ಅದ್ಭುತಗಳಲ್ಲಿ ಒಂದು ಅಂತ ಕರೆಸಿಕೊಂಡು, ಪ್ರೇಮ ಸ್ಮಾರಕ ಎಂದೇ ಖ್ಯಾತಿಯಾದ ತಾಜ್‌ ಮಹಲ್‌ಗೂ ಈಗ ತೆರಿಗೆ ಬಿಸಿ ತಟ್ಟಿದೆ. ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಗುರುತಿಸಲ್ಪಟ್ಟಿರೊ ಈ ಸ್ಮಾರಕಕ್ಕೆ ನೀರು ಮತ್ತು ಆಸ್ತಿ ತೆರಿಗೆ ಅಧಿಕಾರಿಗಳು ನೋಟಿಸ್‌ ಕಳುಹಿಸಿದ್ದಾರೆ. 2021-22 ಹಾಗೂ 2022-23ರ ಹಣಕಾಸು ವರ್ಷಗಳಿಗೆ ಸಂಬಂಧಿಸಿದಂತೆ ಸುಮಾರು 1.9 ಕೋಟಿ ರೂ. ನೀರಿನ ತೆರಿಗೆ ಮತ್ತು 1.50 ಲಕ್ಷ ರೂ. ಆಸ್ತಿಗೆ ಸಂಬಂಧಿಸಿದ ತೆರಿಗೆ ಬಾಕಿಯಿದೆ. ತೆರಿಗೆಯನ್ನ ಕಟ್ಟೋಕೆ 15 ದಿನಗಳ ಗಡುವು ನೀಡಲಾಗಿದ್ದು, ಹಣ ಪಾವತಿಸದಿದ್ರೆ ತಾಜ್‌ ಮಹಲ್‌ನ್ನ ಜಪ್ತಿ ಮಾಡಲಾಗುತ್ತೆ ಅಂತ ಆಗ್ರಾ ಕಾರ್ಪೊರೇಷನ್‌ನಿಂದ ನೋಟಿಸ್‌ ನೀಡಲಾಗಿದೆ. ASIನ ಪುರಾತತ್ವಶಾಸ್ತ್ರಜ್ಞ ರಾಜ್‌ ಕುಮಾರ್‌ ಪಟೇಲ್‌ ಈ ಬಗ್ಗೆ ಮಾಹಿತಿ ನೀಡಿದ್ದಾರೆ.)ಇನ್ನು ತಾಜ್‌ ಮಹಲ್ ದೇಶದಲ್ಲಿ ವಿದೇಶಿ ಪ್ರವಾಸಿಗರನ್ನ ಹೆಚ್ಚು ಆಕರ್ಷಿಸೋ ಪ್ರೇಕ್ಷಣೀಯ ಸ್ಥಳ, ಅತಿಹೆಚ್ಚು ಆದಾಯ ತರುವ ಪ್ರೇಕ್ಷಣೀಯ ಸ್ಥಳ ಸಹ ಹೌದು. ಆದರೆ ಅಲ್ಲೇ ನೀರಿನ‌ ಬಿಲ್‌ ಕಟ್ಟಿಲ್ಲ ಅಂತ ಅಧಿಕಾರಿಗಳು ಹೇಳಿದ್ದಾರೆ.

-masthmagaa.com

Contact Us for Advertisement

Leave a Reply