ಹಿಂದೂ-ಸಿಖ್‌ ಸಮುದಾಯಗಳ ಸಹಾಯಕ್ಕೆ ಪ್ರತಿನಿಧಿ ನೇಮಿಸಿದ ತಾಲಿಬಾನ್‌!

masthmagaa.com:

ತಾಲಿಬಾನ್‌ ಆಡಳಿತವಿರೋ ಅಫ್ಘಾನಿಸ್ತಾನದ ಜೊತೆ ಉತ್ತಮ ಸಂಬಂಧ ಬೆಳೆಸಲು ಭಾರತ ಮತ್ತು ಚೀನಾ ನಡುವೆ ಪೈಪೋಟಿ ಏರ್ಪಟ್ಟಿದೆ ಅನ್ನೋ ಮಾತುಗಳು ಕೇಳಿಬರ್ತಿವೆ. ಇದರ ಬೆನ್ನಲ್ಲೇ ಕಾಬೂಲ್‌ನಲ್ಲಿ ಹಿಂದೂ ಮತ್ತು ಸಿಖ್‌ ಸಮುದಾಯಗಳಿಗಾಗಿ ಪ್ರತಿನಿಧಿಯೊಬ್ರನ್ನ ತಾಲಿಬಾನ್‌ ನೇಮಕ ಮಾಡಿದೆ. ಹೊಸದಾಗಿ ಅಪಾಯಿಂಟ್‌ ಆಗಿರೋ ವ್ಯಕ್ತಿ ಕಾಬೂಲ್‌ನ 22 ಮುನ್ಸಿಪಾಲಿಟಿಗಳ ಕೌನ್ಸಿಲ್‌ ಆಫ್‌ ರೆಪ್ರಸೆಂಟೇಟಿವ್‌ನ ಸದಸ್ಯರಾಗಿ ಕೆಲಸ ಮಾಡಲಿದ್ದು, ಸಿಖ್‌ ಮತ್ತು ಹಿಂದೂಗಳ ಹಕ್ಕುಗಳನ್ನ ಅಡ್ವೊಕೇಟ್‌ ಮಾಡ್ತಾರೆ. ಜೊತೆಗೆ ಸೀಜ್‌ ಮಾಡಿಕೊಳ್ಳಲಾದ ಹಿಂದೂ ಹಾಗೂ ಸಿಖ್‌ರ ಆಸ್ತಿಗಳನ್ನ ಹಿಂದಿರುಗಿಸುವ ಪ್ರಕ್ರಿಯೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ ಅಂತ ತಾಲಿಬಾನ್‌ ಸರ್ಕಾರ ಹೇಳಿದೆ.

-masthmagaa.com

Contact Us for Advertisement

Leave a Reply