ಅಫ್ಘಾನಿಸ್ತಾನ ಯೂನಿವರ್ಸಿಟಿ ಪ್ರವೇಶ ಪರೀಕ್ಷೆ: ವಿದ್ಯಾರ್ಥಿನಿಯರಿಗೆ ನೋ ಎಂಟ್ರಿ ಎಂದ ತಾಲಿಬಾನ್‌!

masthmagaa.com:

ತಾಲಿಬಾನ್‌ ಆಡಳಿತವಿರೋ ಅಫ್ಘಾನಿಸ್ತಾನದಲ್ಲಿ ಮಹಿಳೆಯರು ವಿಶ್ವವಿದ್ಯಾಲಯ ಅಥ್ವಾ ಕಾಲೇಜು ಪ್ರವೇಶ ಮಾಡದಂತೆ ನಿರ್ಬಂಧಿಸಲಾಗಿದೆ. ಇದೀಗ ಅಫ್ಘಾನಿಸ್ತಾನ ವಿಶ್ವವಿದ್ಯಾಲಯದ ಪ್ರವೇಶ ಪರೀಕ್ಷೆಗೆ ವಿದ್ಯಾರ್ಥಿನಿಯರು ಹಾಜರಾಗದಂತೆ ತಾಲಿಬಾನ್‌ ಸೂಚಿಸಿದೆ. ಫೆಬ್ರುವರಿ ತಿಂಗಳಲ್ಲಿ ವಿಶ್ವವಿದ್ಯಾಲಯದ ಎಂಟ್ರೆನ್ಸ್‌ ಟೆಸ್ಟ್‌ ನಡೆಸೋಕೆ ತಾಲಿಬಾನ್‌ ಶಿಕ್ಷಣ ಇಲಾಖೆ ಸಿದ್ಧತೆ ನಡೆಸಿದೆ. ಇದ್ರಲ್ಲಿ ವಿದ್ಯಾರ್ಥಿನಿಯರು ಪ್ರವೇಶ ಪರೀಕ್ಷೆ ಬರೆಯೋಕೆ ಅವಕಾಶವಿಲ್ಲ ಅಂತ ತಾಲಿಬಾನ್‌ ಸರ್ಕಾರ ಆದೇಶ ಹೊರಡಿಸಿದೆ. ಸರ್ಕಾರ ಮುಂದಿನ ಆದೇಶ ಹೊರಡಿಸೊವರೆಗೆ ಮಹಿಳಾ ಅಭ್ಯರ್ಥಿಗಳು ವಿಶ್ವವಿದ್ಯಾಲಯದ ಪ್ರವೇಶ ಪರೀಕ್ಷೆ ಬರೆಯುವಂತಿಲ್ಲ. ಅವ್ರಿಗೆ ಪ್ರವೇಶ ಪರೀಕ್ಷೆಗೆ ರಿಜಿಸ್ಟರ್‌ ಮಾಡಿಕೊಳ್ಳೋಕೆ ಅವಕಾಶವಿಲ್ಲ ಅಂತ ಹೇಳಿದೆ.

-masthmagaa.com

Contact Us for Advertisement

Leave a Reply