ಮಹಿಳಾ ಸೌಂದರ್ಯದ ಮೇಲೆ ಸಿಟ್ಟು, ಬ್ಯೂಟಿ ಸಲೂನ್‌ ಬ್ಯಾನ್‌ ಮಾಡಿದ ತಾಲಿಬಾನ್‌!

masthmagaa.com:

ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್‌ ಸೇರಿದಂತೆ ಇತರ ಪ್ರಾಂತ್ಯಗಳಲ್ಲಿ ಮಹಿಳೆಯರ ಬ್ಯೂಟಿ ಸಲೂನ್‌ಗಳನ್ನ ತಾಲಿಬಾನ್ ಬ್ಯಾನ್‌ ಮಾಡಿದೆ. ಕೂಡಲೇ ಎಲ್ಲಾ ಬ್ಯೂಟಿ ಸಲೂನ್‌ಗಳ ಲೈಸೆನ್ಸ್‌ ಕ್ಯಾನ್ಸಲ್‌ ನಿಷೇಧ ಹೇರುವಂತೆ ಅಲ್ಲಿನ ಮುನ್ಸಿಪಾಲಿಟಿಗಳಿಗೆ ಸೂಚನೆ ನೀಡಲಾಗಿದೆ ಅಂತ ತಾಲಿಬಾನ್‌ Vice and Virtue ಸಚಿವಾಲಯದ ವಕ್ತಾರ ಮೊಹಮ್ಮದ್‌ ಅಕೀಫ್‌ ಮಹಜರ್‌ ಅವ್ರು ಹೇಳಿದ್ದಾರೆ. ಇನ್ನು ಆದೇಶ ಹೊರ ಬೀಳುತ್ತಿದ್ದಂತೆ ಅಲ್ಲಿನ ಮೇಕ್‌ಅಪ್‌ ಆರ್ಟಿಸ್ಟ್‌ಗಳು ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಇತ್ತೀಚೆಗೆ ಅಫ್ಘಾನಿಸ್ತಾನದ ಪುರುಷರಿಗೆ ಮಾಡೋಕೆ ಕೆಲಸ ಇಲ್ದೆ, ಮನೆಯನ್ನ ನೋಡಿಕೊಳ್ಳೋಕೆ ಸಾಧ್ಯವಾಗ್ತಿಲ್ಲ. ಒಂದೊತ್ತಿನ ಊಟಕ್ಕೂ ಕಷ್ಟಪಡೋ ಪರಿಸ್ಥಿತಿ ಇದೆ. ಹೀಗಾಗಿ ಮಹಿಳೆಯರು ಬ್ಯೂಟಿ ಸಲೂನ್‌ಗಳಿಗೆ ಕೆಲಸಕ್ಕೆ ಬರ್ತಿದಾರೆ. ಇದೀಗ ಅದನ್ನೂ ಬ್ಯಾನ್‌ ಮಾಡಿದ್ರೆ ನಾವೇನ್‌ ಮಾಡ್ಬೇಕು ಅಂತ ಅಲ್ಲಿನ ಮೇಕ್‌ಅಪ್‌ ಅರ್ಟಿಸ್ಟ್‌ ಒಬ್ರು ತಮ್ಮ ಅಳಲನ್ನ ತೋಡಿಕೊಂಡಿದ್ದಾರೆ.

-masthmagaa.com

Contact Us for Advertisement

Leave a Reply