ಪಾಕ್ ಸೇನೆ ಮೇಲೆ ದಾಳಿ ನಡೆಸಿ 9 ಅಧಿಕಾರಿಗಳನ್ನ ಒತ್ತೆಯಾಳಾಗಿರಿಸಿಕೊಂಡ ತಾಲಿಬಾನ್!

masthmagaa.com:

ಪಕ್ಕದ ಪಾಕ್‌ಗೆ ರಾಹುಕಾಲ ಆರಂಭವಾಗಿದೆ ಅನಸ್ತಿದೆ. ಒಂದ್‌ ಕಡೆ ರಾಜಕೀಯ ಬಿಕ್ಕಟ್ಟು, ಇನ್ನೊಂದ್‌ ಕಡೆ ಆರ್ಥಿಕ ತೊಂದರೆ ಮತ್ತೊಂದ್‌ ಕಡೆ ಭಯೋತ್ಪಾದಕರ ಅಟ್ಟಹಾಸ. ಎಲ್ಲದರಿಂದ ಪಾಕ್‌ ಹಾಗೂ ಅಲ್ಲಿನ ಜನ ತತ್ತರಿಸಿ ಹೋಗಿದ್ದಾರೆ. ಇದೀಗ ಟಿಟಿಪಿ ಅಂದ್ರೆ ಪಾಕ್‌ನ ತಾಲಿಬಾನಿಗಳ ಘಟಕ ಅಲ್ಲಿನ ಭಯೋತ್ಪಾದನಾ ನಿಗ್ರಹ ಇಲಾಖೆ (CTD)ಯನ್ನ ಗುರಿಯಾಗಿಸಿಕೊಂಡಿದೆ. ಪಾಕ್‌ನ ಖೈಬರ್‌ ಪಂಕುತ್ವಾ (Pakhtunkhwa) ಪ್ರಾಂತ್ಯದ ಬನ್ನು ಜಿಲ್ಲೆಯ ಕೇಂದ್ರದ ಮೇಲೆ ತಾಲಿಬಾನಿಗಳು ಅಟ್ಯಾಕ್‌ ಮಾಡಿದ್ದಾರೆ. ದಾಳಿಯಲ್ಲಿ ಕೆಲ ಪಾಕ್‌ ಸೈನಿಕರು ಮೃತಪಟ್ಟಿದ್ದಾರೆ. ಇನ್ನು ಸೆಂಟರ್​ನಲ್ಲಿ ಬಂಧಿತರಾಗಿದ್ದ ಉಗ್ರರನ್ನ ರಿಲೀಸ್‌ ಮಾಡಿದ್ದು, 9 ಸಿಟಿಡಿ ಅಧಿಕಾರಿಗಳನ್ನ ಒತ್ತೆಯಾಳಾಗಿ ಇರಿಸಿಕೊಂಡಿದ್ದಾರೆ ಅಂತ ಅಲ್ಲಿನ ಪೊಲೀಸರು ಮಾಹಿತಿ ನೀಡಿದ್ದಾರೆ. ಅಲ್ದೇ ಟಿಟಿಪಿ ಉಗ್ರರು ಕಟ್ಟಡದ ಒಳಗಿನಿಂದಾನೇ ವಿಡಿಯೋ ಒಂದನ್ನ ರಿಲೀಸ್‌ ಮಾಡಿದ್ದಾರೆ. ಅದ್ರಲ್ಲಿ 9 ಅಧಿಕಾರಿಗಳನ್ನ ಒತ್ತೆಯಾಳಾಗಿ ಇರಿಸಿಕೊಳ್ಳಲಾಗಿದೆ. ಅವ್ರನ್ನ ಬಿಡಬೇಕು ಅಂದ್ರೆ ನಾವು ಸುರಕ್ಷಿತವಾಗಿ ಅಫ್ಘಾಸ್ತಾನಕ್ಕೆ ಹೋಗೋಕೆ ಬಿಡಬೇಕು ಅಂತ ಡಿಮ್ಯಾಂಡ್‌ ಮಾಡಿದ್ದಾರೆ. ಈ ಬಗ್ಗೆ ಮಾತಾಡಿದ ಅಧಿಕಾರಿಯೊಬ್ರು ಪರಿಸ್ಥಿತಿ ನಿಯಂತ್ರಣದಲ್ಲಿದೆ. ಭದ್ರತಾ ಪಡೆ ಪ್ರದೇಶವನ್ನ ಸುತ್ತುವರೆದಿದ್ದಾರೆ. ಕಾರ್ಯಾಚರಣೆ ನಡಿತಾಯಿದ್ದು, ಬೇಗನೇ ಪೂರ್ಣಗೊಳ್ಳುತ್ತೆ ಅಂತ ಹೇಳಿದ್ದಾರೆ. ಇನ್ನೊಂದ್‌ ಕಡೆ ಇದೇ ಪ್ರಾಂತ್ಯದ ಹೊಸದಾಗಿ ನಿರ್ಮಿಸಿರೊ ಪೊಲೀಸ್‌ ಸ್ಟೇಷನ್‌ ಮೇಲೆ ದಾಳಿಯಾಗಿದೆ. ದಾಳಿಯಲ್ಲಿ 4 ಪೊಲೀಸರು ಮೃತಪಟ್ಟಿದ್ದು, ಇತರ 4 ಪೊಲೀಸರು ಗಾಯಗೊಂಡಿದ್ದಾರೆ. ಶಂಕಿತ ಉಗ್ರರು ದಾಳಿ ಬಳಿಕ ಪರಾರಿಯಾಗಿದ್ದು, ದಾಳಿಯ ಹೊಣೆಯನ್ನ ಯಾವುದೇ ಉಗ್ರ ಸಂಘಟನೆ ಹೊತ್ತುಕೊಂಡಿಲ್ಲ. ಇನ್ನು ಘಟನೆಗೆ ಪಾಕ್‌ ಅಧ್ಯಕ್ಷ ಆರಿಫ್‌ ಅಲ್ವಿ ಸಂತಾಪ ಸೂಚಿಸಿದ್ದು, ಭಯೋತ್ಪಾದಕತೆಯನ್ನ ಎಲಿಮಿನೇಟ್‌ ಮಾಡೋ ನಮ್ಮ ಪ್ರಯತ್ನ ಮುಂದುವರೆಯುತ್ತೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply