ನಾವು ಚೀನಾದ BRIಗೆ ಸೇರ್ತೀವಿ: ತಾಲಿಬಾನ್‌

masthmagaa.com:

ತಾಲಿಬಾನ್‌ ಆಡಳಿತ ಚೀನಾದ ಮಹತ್ವಾಕಾಂಕ್ಷಿ Belt and Road Initiative(BRI)ಗೆ ಫಾರ್ಮಲ್‌ ಆಗಿ ಸೇರಿಕೊಳ್ಳಲು ಬಯಸಿದ್ದೇವೆ ಅಂತ ತಾಲಿಬಾನ್‌ ಹೇಳಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಚೀನಾ ಜೊತೆಯಲ್ಲಿ ಮಾತುಕತೆ ನಡೆಸಲು ಉನ್ನತ ಮಟ್ಟದ ಟೆಕ್ನಿಕಲ್‌ ಟಿಮ್‌ವೊಂದನ್ನ ಕಳಿಸಲಿದ್ದೇವೆ ಅಂತ ತಾಲಿಬಾನ್‌ ಹಂಗಾಮಿ ವಾಣಿಜ್ಯ ಸಚಿವ ಹಾಜಿ ನೂರುದ್ದೀನ್‌ ಅಜಿಜಿ ಹೇಳಿದ್ದಾರೆ. ಚೀನಾ ಮತ್ತು ಪಾಕಿಸ್ತಾನ ಕಾರಿಡಾರ್‌ ಹಾಗೂ BRIಗೆ ನಮ್ಮನ್ನ ಸೇರಿಸಿಕೊಳ್ಳುವಂತೆ ನಾವು ಚೀನಾವನ್ನ ರಿಕ್ವೆಸ್ಟ್‌ ಮಾಡಿದ್ದೀವಿ ಅಂತ ಅಜಿಜಿ ತಿಳಿಸಿದ್ದಾರೆ. ಅಂದ್ಹಾಗೆ ಅಫ್ಘಾನಿಸ್ತಾನದಲ್ಲಿ ತಾಲಿಬಾನ್‌ ಆಡಳಿತವನ್ನ ಜಾಗತಿಕವಾಗಿ ಗುರುತಿಸಿಲ್ಲ. ಆದ್ರೆ ಚೀನಾ ಮಾತ್ರ ಅಫ್ಘಾನಿಸ್ತಾನದಲ್ಲಿ ತನ್ನ ರಾಯಭಾರ ಕಚೇರಿಯನ್ನ ಪ್ರಾರಂಭಿಸಿದ್ದಲ್ದೆ ತಾಲಿಬಾನ್‌ಗಳ ಜೊತೆ ಹಲವು ಒಪ್ಪಂದಗಳ ಕುರಿತು ಮಾತುಕತೆ ನಡಸುತ್ತಿದೆ. ಅಷ್ಟೆ ಅಲ್ದೆ ಮೊದಲ ಬಾರಿಗೆ ಚೀನಾ ತನ್ನ ಅತಿದೊಡ್ಡ BRI ಫೋರಂಗೆ ತಾಲಿಬಾನ್‌ ಅಧಿಕಾರಿಗಳಿಗೆ ಆಹ್ವಾನ ನೀಡಿತ್ತು.

-masthmagaa.com

Contact Us for Advertisement

Leave a Reply