ಕಾರ್ಖಾನೆಯಲ್ಲಿ ಸ್ಪೋಟ: 9 ಜನರ ಸಾವು, ಕಟ್ಟಡಗಳು ನೆಲಸಮ!

masthmagaa.com:

ಪಟಾಕಿ ಕಾರ್ಖಾನೆಯೊಂದರಲ್ಲಿ ಸ್ಪೋಟ ಸಂಭವಿಸಿ, 9 ಜನ ಮೃತಪಟ್ಟಿರೋ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಇಲ್ಲಿನ ವೆಂಬಕೊಟ್ಟೈನಲ್ಲಿ ನಡೆದ ಈ ಭಾರಿ ಸ್ಪೋಟದಿಂದಾಗಿ ಕಾರ್ಖಾನೆ ಸೇರಿದಂತೆ ನಾಲ್ಕು ಕಟ್ಟಡಗಳು ನೆಲಸಮವಾಗಿವೆ. ಇನ್ನು ಘಟನೆಯಲ್ಲಿ ಗಾಯಗೊಂಡ ಹಲವು ಜನರನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ ಅಂತ ವರದಿಯಾಗಿದೆ. ಕಾರ್ಖಾನೆಯ ಕೆಮಿಕಲ್‌ ಮಿಕ್ಸಿಂಗ್‌ ರೂಂನಲ್ಲಿ ಈ ಸ್ಪೋಟ ಸಂಭವಸಿರೋ ಶಂಕೆಯಿದ್ದು ಪೊಲೀಸರು ತನಿಖೆ ಶುರು ಮಾಡಿದ್ದಾರೆ.

-masthmagaa.com

Contact Us for Advertisement

Leave a Reply