ನೀಟ್‌ ಪರೀಕ್ಷೆ ರದ್ದತಿಗೆ ಕಡೆಗೂ ಶಿಫಾರಸ್ಸು ಕಳುಹಿಸಿದ ತ.ನಾಡು ಗವರ್ನರ್

masthmagaa.com:

ತಮಿಳುನಾಡಿನ ಸರ್ಕಾರ ಮತ್ತು ಅಲ್ಲಿನ ಗವರ್ನರ್‌ ನಡುವಿನ ಮುಸುಕಿನ ಗುದ್ದಾಟಕ್ಕೆ ಕಾರಣವಾಗಿದ್ದ ನೀಟ್‌ ಪರೀಕ್ಷೆಯ ವಿವಾದ ಬಗೆಹರಿಯುವ ಲಕ್ಷಣ ಕಾಣಿಸ್ತಿದೆ. ನೀಟ್‌ (ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ)ಯನ್ನ ರದ್ದು ಮಾಡುವ ಅಲ್ಲಿನ ವಿಧಾನಸಭಾ ಅಂಗೀಕಾರವನ್ನ ಕಡೆಗೂ ರಾಜ್ಯಪಾಲ ಎನ್‌.ಆರ್‌. ರವಿ ಕೇಂದ್ರ ಸರ್ಕಾರದ ಒಪ್ಪಿಗೆಗೆ ಕಳುಹಿಸಿಕೊಟ್ಟಿದ್ದಾರೆ. ಈ ಬಗ್ಗೆ ಮಾತಾಡಿದ ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್‌, ನಮ್ಮ ಮನವಿಗೆ ಸ್ಪಂದಿಸಿ ರಾಜ್ಯಪಾಲರು ಕೇಂದ್ರಕ್ಕೆ ಶಿಫಾರಸು ಮಾಡಿದ್ದಾರೆ. ಇದರಿಂದ ತುಂಬಾ ಸಂತೋಷ ಆಗ್ತಿದೆ. ಪಕ್ಷಾತೀತವಾಗಿ ಎಲ್ಲರೂ ಇದಕ್ಕೆ ಸಹಕಾರ ನೀಡ್ಬೇಕು ಎಂದಿದ್ದಾರೆ.

-masthmagaa.com

Contact Us for Advertisement

Leave a Reply