ತಮಿಳುನಾಡಿನ ಹೆಸರೇ ಚೇಂಜ್‌! ಹೊಸ ಹೆಸರು ಏನ್‌ ಗೊತ್ತಾ?

masthmagaa.com:

ತಮಿಳುನಾಡು ರಾಜ್ಯ ಸರ್ಕಾರ ಮತ್ತು ರಾಜ್ಯಪಾಲ ಆರ್‌.ಎನ್‌ ರವಿ ಅವ್ರ ನಡುವೆ ರಾಜಕೀಯ ತಿಕ್ಕಾಟ ಮುಂದುವರೆದಿದೆ. ನೆನ್ನೆ ಅಲ್ಲಿನ ವಿಧಾನಸಭೆ ಭಾಷಣಕ್ಕೆ ಸಂಬಂಧಿಸಿದಂತೆ ಸಿಎಂ ಸ್ಟಾಲಿನ್‌ ಮತ್ತು ರಾಜ್ಯಪಾಲ ರವಿ ಅವ್ರ ಮಧ್ಯ ಭಿನ್ನಾಬಿಪ್ರಾಯ ಉಂಟಾಗಿತ್ತು. ಈ ವೇಳೆ ರಾಜ್ಯಪಾಲರು ಸದನದಿಂದ ಹೊರ ನಡೆದಿದ್ರು. ಇದೀಗ ರಾಜ್ಯಪಾಲರು ಪೊಂಗಲ್‌ ಹಬ್ಬದ ಇನ್ವಿಟೇಶನ್‌ನಲ್ಲಿ ತಮಿಳುನಾಡು ಸರ್ಕಾರ ಬದಲಿಗೆ ತಮಿಳಗಂ ಅಂತ ಬಳಸಿರೋದು ಭಾರಿ ಚರ್ಚೆಗೆ ಕಾರಣವಾಗಿದೆ. ರಾಜಭವನದ ಪೊಂಗಲ್‌ ಹಬ್ಬದ ಆಹ್ವಾನ ಪತ್ರಿಕೆಯಲ್ಲಿ ಕೇವಲ ಭಾರತ ಸರ್ಕಾರದ ಲಾಂಛನ ಇದ್ದು, ತಮಿಳುನಾಡಿನ ಲಾಂಛನ ಇಲ್ಲ ಅನ್ನೋದು ವಿವಾದವನ್ನ ಸೃಷ್ಠಿಮಾಡಿದೆ. ಇತ್ತೀಚಿನ ಕಾರ್ಯಕ್ರಮ ಒಂದ್ರಲ್ಲಿ ಮಾತನಾಡಿದ್ದ ರಾಜ್ಯಪಾಲ ರವಿ ಅವ್ರು, ತಮಿಳುನಾಡು ಅನ್ನೊ ಪದಕ್ಕಿಂತ ತಮಿಳಗಂ ಹೆಚ್ಚು ಸೂಕ್ತವಾಗಿದೆ ಅಂತ ಹೇಳಿದ್ರು. ಇದಕ್ಕೆ ಅಲ್ಲಿನ ಸರ್ಕಾರ ವಿರೋಧ ವ್ಯಕ್ತಪಡಿಸಿತ್ತು. ಹಾಗೂ ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಐಡಿಯಾಲಜಿಗಳನ್ನ ತಮಿಳುನಾಡು ಮೇಲೆ ಹೇರೊ ಕೆಲಸ ಮಾಡ್ಬೇಡಿ ಅಂತ ಹೇಳಿತ್ತು. ಇತ್ತ ರವಿ ಅವ್ರ ಈ ನಡೆಯನ್ನ ವಿರೋಧಿಸಿ ಚೆನ್ನೈ ಸುತ್ತಮುತ್ತ ‘#Getout Ravi’ ಅನ್ನೋ ಪೋಸ್ಟರ್‌ಗಳನ್ನ ಹಾಕಲಾಗಿದೆ.

-masthmagaa.com

Contact Us for Advertisement

Leave a Reply