ತಮಿಳುನಾಡಿನಲ್ಲಿ RSS ರ‍್ಯಾಲಿಗೆ ʼNoʼ ಎಂದ ಹೈಕೋರ್ಟ್..!‌ ಕಾರಣ ಏನು ಗೊತ್ತಾ?

masthmagaa.com:

ಮದುರೈ ಸೇರಿ 3 ಜಿಲ್ಲೆಗಳಲ್ಲಿ ಅಕ್ಟೋಬರ್‌ 22ರಂದು ರ‍್ಯಾಲಿ ನಡೆಸಲು RSS ಪರ್ಮಿಷನ್‌ ಕೇಳಿತ್ತು. ಆದ್ರೆ RSSನ ಈ ಮನವಿಯನ್ನ ತಮಿಳುನಾಡು ಹೈಕೋರ್ಟ್‌ ನಿರಾಕರಿಸಿದೆ. ತಂಜಾವೂರ್‌, ತ್ರಿಚಿ, ಕನ್ಯಾಕುಮಾರಿ ಸೇರಿದಂತೆ ಒಟ್ಟು 14 ಜಿಲ್ಲೆಗಳ 20 ಸ್ಥಳಗಳಲ್ಲಿ ರ‍್ಯಾಲಿ ನಡೆಸಲು ರಾಷ್ಟ್ರೀಯ ಸ್ವಯಂಸೇವಕಾ ಸಂಘ(RSS) ತಮಿಳುನಾಡು ಸರ್ಕಾರಕ್ಕೆ ಅರ್ಜಿ ಸಲ್ಲಿಸಿತ್ತು. ಸ್ಟಾಲಿನ್‌ ಸರ್ಕಾರ RSS ರ‍್ಯಾಲಿ ಕೈಗೊಳ್ಳುವ ಮಾರ್ಗಗಳಲ್ಲಿ ಬೇರೆ ಧರ್ಮಗಳ ಪ್ರಾರ್ಥನಾ ಸ್ಥಳಗಳಿವೆ ಅನ್ನೋ ಕಾರಣ ನೀಡಿ ಅನುಮತಿ ನೀಡಿರ್ಲಿಲ್ಲ. ಈ ವಿಚಾರವಾಗಿ RSS ಮದ್ರಾಸ್‌ ಹೈಕೋರ್ಟ್‌ನ ಮೊರೆ ಹೋಗಿತ್ತು. ಈ ಸಂಬಂಧ ವಿಚಾರಣೆ ನಡೆಸಿದ ಮದ್ರಾಸ್‌ ಹೈಕೋರ್ಟ್‌ನ ಮದುರೈ ಪೀಠ RSSಗೆ 11 ಜಿಲ್ಲೆಗಳಲ್ಲಿ ಕೇವಲ ಮಾರ್ಚ್/ಪಥ ಸಂಚಲನ ಮಾಡಲಷ್ಟೇ ಅನುಮತಿ ನೀಡಿದೆ. ದೊಡ್ಡದಾಗಿ ರ‍್ಯಾಲಿ ಮಾಡೋಕೆ ಪರ್ಮಿಷನ್‌ ಕೊಟ್ಟಿಲ್ಲ. ಇನ್ನುಳಿದ 3 ಜಿಲ್ಲೆಯಲ್ಲಿ ಪಥಸಂಚಲನ ಮಾಡೋಕು ಅವಕಾಶ ಕೊಟ್ಟಿಲ್ಲ.

-masthmagaa.com

Contact Us for Advertisement

Leave a Reply