ತಮಿಳುನಾಡಿನಲ್ಲಿ ನೂತನ ಟಾಟಾ ಮೋಟರ್ಸ್‌ ತಯಾರಿಕಾ ಘಟಕ!

masthmagaa.com:

ಭಾರತದ ಅತೀದೊಡ್ಡ ಆಟೋಮೊಬೈಲ್‌ ಕಂಪನಿ ಟಾಟಾ ಮೋಟರ್ಸ್‌ ಇದೀಗ ತಮಿಳುನಾಡಿನಲ್ಲಿ ತನ್ನ ನೂತನ ವಾಹನ ತಯಾರಿಕಾ ಘಟಕ ನಿರ್ಮಾಣಕ್ಕೆ ಮುಂದಾಗಿದೆ. ತಮಿಳುನಾಡು ಸರ್ಕಾರದ ಜೊತೆ ಟಾಟಾ ಮೋಟರ್ಸ್‌ ಅಗ್ರೀಮೆಂಟ್‌ಗೆ ಸೈನ್‌ ಹಾಕಿದೆ. ಈ ನೂತನ ಘಟಕವನ್ನ ಮುಂದಿನ 5 ವರ್ಷಗಳಲ್ಲಿ ನಿರ್ಮಾಣ ಮಾಡೋ ಪ್ಲಾನ್‌ ಮಾಡಲಾಗಿದ್ದು, ಇದಕ್ಕೆ ಟಾಟಾ ಕಂಪನಿ ಸುಮಾರು 9000 ಕೋಟಿ ರೂಪಾಯಿ ಹೂಡಿಕೆ ಮಾಡಲಿದೆ. ಈ ಮೂಲಕ ಸುಮಾರು 5,000 ಉದ್ಯೋಗ ಸೃಷ್ಟಿಸೋ ಉದ್ದೇಶ ಕೂಡ ಹೊಂದಿದೆ. ಅಂದ್ಹಾಗೆ ತಮಿಳುನಾಡು ಸಿಎಂ ಎಮ್‌ ಕೆ ಸ್ಟಾಲಿನ್‌ ಅವ್ರ ಉಪಸ್ಥಿತಿಯಲ್ಲಿ ಈ ಒಪ್ಪಂದ ಮಾಡಿಕೊಳ್ಳಲಾಗಿದೆ. ಇನ್ನು ಸದ್ಯ ಟಾಟಾ ಮೋಟಾರ್ಸ್‌ ಷೇರು ಮೌಲ್ಯ ಪ್ರತಿ ಷೇರಿಗೆ ₹968.40ರಷ್ಟಿದೆ.

-masthmagaa.com

Contact Us for Advertisement

Leave a Reply