2023ರಲ್ಲಿ ಜಾಗತಿಕವಾಗಿ 1 ಲಕ್ಷ ಜಾಬ್‌ ಗಾನ್!‌

masthmagaa.com:

ಆರ್ಥಿಕ ಹಿಂಜರಿತದ ಭೀತಿಯಿಂದ ಕಂಪನಿ ವೆಚ್ಚ ಕಡಿತದ ಭಾಗವಾಗಿ ಈ ವರ್ಷದಲ್ಲೇ ಅಂದ್ರೆ 2023ರಲ್ಲೇ ಆರಂಭದಿಂದ ಇಲ್ಲಿಯವರೆಗೆ ವಿಶ್ವಾದ್ಯಂತ ಟೆಕ್‌ ಕಂಪನಿಗಳು ಸುಮಾರು 1 ಲಕ್ಷ ಉದ್ಯೋಗಿಗಳನ್ನ ವಜಾಗೊಳಿಸಿವೆ ಅನ್ನೋದು ಅಂಕಿಅಂಶಗಳಿಂದ ಗೊತ್ತಾಗಿದೆ.. ಲೇಆಫ್ಸ್‌ ಡಾಟ್‌ ಫೈ ಬಿಡುಗಡೆ ಮಾಡಿರೊ ಇತ್ತೀಚಿನ ಅಂಕಿ ಅಂಶಗಳ ಪ್ರಕಾರ, 2023ರಲ್ಲಿ ಜಾಗತಿಕವಾಗಿ 332 ಕಂಪನಿಗಳು ಈವರೆಗೆ 1,00,746 ಉದ್ಯೋಗಿಗಳನ್ನ ಕೆಲಸದಿಂದ ವಜಾಗೊಳಿಸಿವೆ. ಗೂಗಲ್, ಮೈಕ್ರೋಸಾಫ್ಟ್, ಸೇಲ್ಸ್​ಫೊರ್ಸ್, ಅಮೆಜಾನ್ ಹಾಗೂ ಇತರ ಕಂಪನಿಗಳು ಸಾವಿರಾರು ಸಂಖ್ಯೆಯಲ್ಲಿ ಉದ್ಯೋಗಿಗಳನ್ನು ಕೆಲಸದಿಂದ ತೆಗದುಹಾಕಿವೆ.

-masthmagaa.com

Contact Us for Advertisement

Leave a Reply