ಲಂಡನ್: ಹೈದರಾಬಾದ್‌ನ 27 ವರ್ಷದ ಯುವತಿ ಹತ್ಯೆ

masthmagaa.com:

ಲಂಡನ್‌ನ ವೆಂಬ್ಲಿನಲ್ಲಿ ಹೈದರಾಬಾದ್‌ನ 27 ವರ್ಷದ ಯುವತಿಯನ್ನ ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ. ಉನ್ನತ ವ್ಯಾಸಂಗಕ್ಕಾಗಿ ತೆರಳಿದ್ದ ತೇಜಸ್ವಿನಿ ರೆಡ್ಡಿ ಅನ್ನೊ ಯುವತಿ ಮೃತ ದುರ್ದೈವಿ. ಬ್ರೆಜಿಲ್‌ನ ವ್ಯಕ್ತಿ ಚಾಕುವಿನಿಂದ ಇರಿದಿದ್ದು, ಯುವತಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಈಕೆಯ ಜೊತೆಗೆ ಇನ್ನೊಬ್ಬ ಯುವತಿಗೂ ಚಾಕುವಿನಿಂದ ಇರಿದು ಗಾಯ ಮಾಡಲಾಗಿದೆ. ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನ ಅರೆಸ್ಟ್‌ ಮಾಡಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಅಂತ ಅಲ್ಲಿನ ಪೊಲೀಸರು ಹೇಳಿದ್ದಾರೆ.

-masthmagaa.com

Contact Us for Advertisement

Leave a Reply