ರಾಜಕೀಯ ಪಕ್ಷಗಳಿಗೆ ಕದನಕಣವಾದ ತೆಲಂಗಾಣ..! ಮೋದಿ ಸ್ವಾಗತಕ್ಕೆ ಬರದ KCR!

masthmagaa.com:

ತೆಲಂಗಾಣ ಇಂದು ರಾಷ್ಟ್ರ ರಾಜಕೀಯದ ಎರಡು ಬಲಾಡ್ಯ ಶಕ್ತಿಗಳ ಕದನ ಕಣವಾಗಿ ಮಾರ್ಪಡಾಗಿದೆ. ಬಿಜೆಪಿಯ ಬಹುನಿರೀಕ್ಷಿತ ರಾಷ್ಟ್ರೀಯ ಕಾರ್ಯಕಾರಣಿ ಸಭೆ ಹಾಗೂ ಪ್ರತಿಪಕ್ಷಗಳಗಳ ರಾಷ್ಟ್ರಪತಿ ಚುನಾವಣೆಯ ರ್ಯಾಲಿಯ ಭಾಗವಾಗಿ ಇಂದು ದೇಶದ ಟಾಪ್‌ ನಾಯಕರು ತೆಲಂಗಾಣದಲ್ಲಿ ಬೀಡು ಬಿಟ್ಟಿದ್ದಾರೆ. ಹೈದ್ರಾಬಾದ್‌ನಲ್ಲಿ ನಡೆಯಲಿರುವ ಎರಡು ದಿನಗಳ ಈ ಬಿಜೆಪಿ ಕಾರ್ಯಕಾರಿಣಿ ಸಭೆಗೆ ಪ್ರಧಾನಿ ಮೋದಿ, ಅಮಿತ್‌ ಶಾ ಸೇರಿದಂತೆ ಇಡೀ ಬಿಜೆಪಿ ಸೇನೆಯೇ KCR ಕೋಟೆಗೆ ಲಗ್ಗೆಇಟ್ಟಿದೆ. ಇನ್ನು ಈ ಬಿಜೆಪಿಯ ಲೀಡರ್‌ಗಳು ಬರೋಕೂ ಮುಂಚೆ ಮಾತನಾಡಿದ್ದ ತೆಲಂಗಾಣ ಸಚಿವ ರಾಮರಾವ್‌ ʻಹೈದ್ರಾಬಾದ್‌ ಒಂದು ಸುಂದರ ನಗರ. ಇಲ್ಲಿಗೆ ಬರುತ್ತಿರೋ ವಾಟ್ಸಾಪ್‌ ಯೂನಿವರ್ಸಿಟಿಗೆ ಸ್ವಾಗತ..ಇಲ್ಲಿಗೆ ಬಂದು ಟೀ ಹಾಗೂ ನಮ್ಮ ಧಮ್‌ ಬಿರಿಯಾನಿ ತಿಂದುಕೊಂಡು ಹೋಗೋದನ್ನ ಮಾತ್ರ ಮರೀಬೇಡಿ ಅಂತ ಬಿಜೆಪಿಗರನ್ನ ಕುಟುಕಿದ್ದಾರೆ . ಇತ್ತ ಈ ಬಾರಿ ಕೂಡ ಕೆಸಿಆರ್‌ ಮತ್ತೆ ಹಠ ಸಾಧಿಸಿದ್ದು ಪ್ರಧಾನಿ ಮೋದಿಯವರನ್ನ ಬರಮಾಡಿಕೊಳ್ಳುವ ಸ್ವಾಗತ ಕಾರ್ಯಕ್ರಮಕ್ಕೆ ಹೋಗಿಲ್ಲ..ಪ್ರೋಟೋಕಾಲ್‌ ಪ್ರಕಾರ ಭಾರತದ ಪ್ರಧಾನಿ ಯಾವುದೇ ರಾಜ್ಯಕ್ಕೆ ಹೋದ್ರೂ ಅಲ್ಲಿರೋ ಮುಖ್ಯ ಮಂತ್ರಿಗಳು ಹೋಗಿ ಅವರನ್ನ ಸ್ವಾಗತ ಮಾಡೋದು ವಾಡಿಕೆ. ಆದ್ರೆ ಮೋದಿ ವಿರುದ್ದ ಮುನಿಸಿಕೊಂಡಿರೋ ಕೆಸಿಆರ್‌ ಸತತ ಮೂರನೇ ಬಾರಿಗೆ ಶಿಷ್ಟಾಚಾರವನ್ನ ಪಾಲಿಸಿಲ್ಲ. ಆದ್ರೆ ಇದೇ ಸಂದರ್ಭದಲ್ಲಿ ಪ್ರತಿಪ್ರಕ್ಷಗಳ ರಾಷ್ಟ್ರಪತಿ ಅಭ್ಯರ್ಥಿ ಯಶ್ವಂತ್‌ ಸಿನ್ಹಾರನ್ನ ಏರ್ಫೋರ್ಟ್‌ಗೆ ಹೋಗಿ ಕರೆದುಕೊಂಡು ಬಂದಿದ್ದಾರೆ. ಇತ್ತ ತೆಲಂಗಾಣದಲ್ಲಿ ಬಿಜೆಪಿ ಕಾರ್ಯಕರ್ತರು ಸ್ಪರ್ಧೆಗೆ ಬಿದ್ದವರಂತೆ ಬ್ಯಾನರ್‌ ಹಾಕಿದ್ದಾರೆ.

-masthmagaa.com

Contact Us for Advertisement

Leave a Reply