ಚುನಾವಣೆ ಸೋತ ಬೆನ್ನಲ್ಲೇ ಆಸ್ಪತ್ರೆಗೆ ದಾಖಲಾದ ಕೆಸಿಆರ್‌! ಪ್ರಧಾನಿಯಿಂದ ಹಾರೈಕೆ!

masthmagaa.com:

ನೂತನ ತೆಲಂಗಾಣ ರಾಜ್ಯಕ್ಕಾಗಿ ಶ್ರಮಿಸಿ, ರಾಜ್ಯದ ಮೊದಲ ಸಿಎಂ ಆಗಿದ್ದ ಕೆ.ಚಂದ್ರಶೇಖರ್‌ ರಾವ್‌ ಇದೀಗ ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ತೆಲಂಗಾಣ ಎಲೆಕ್ಷನ್‌ ರಿಸಲ್ಟ್‌ನ ಸೋಲಿನ ಆಘಾತದಿಂದ ಕೆಸಿಆರ್ ಹತಾಶೆಯಾಗಿ ಗುರುವಾರ ತಮ್ಮ ಈರವಳ್ಳಿ ಫಾರ್ಮ್‌ಹೌಸ್‌ನಲ್ಲಿ ಕುಸಿದು ಬಿದ್ದಿದ್ರು. ಅವ್ರನ್ನ ಹೈದ್ರಾಬಾದ್‌ನ ಯಶೋಧಾ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಪಡಿಯುತ್ತಿದ್ದಾರೆ. ಇತ್ತ ಕೆಸಿಆರ್‌ ಬೇಗ ಚೇತರಿಸಿಕೊಂಡು ಗುಣಮುಖರಾಗಲಿ, ದೇವರು ಅವರಿಗೆ ಒಳ್ಳೆಯ ಆರೋಗ್ಯ ಕರುಣಿಸಲಿ ಅಂತ ಪ್ರಧಾನಿ ಮೋದಿ ಶುಭ ಹಾರೈಸಿ ಎಕ್ಸ್‌ ಖಾತೆಯಲ್ಲಿ ತಿಳಿಸಿದ್ದಾರೆ. ಜೊತೆಗೆ ಮಾಜಿ ಸಂಸದೆ, ಕೆಸಿಆರ್‌ ಪುತ್ರಿ ಕವಿತಾ ಎಕ್ಸ್‌ನಲ್ಲಿ, ಅಪ್ಪನಿಗೆ ಸಾಮಾನ್ಯ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ಪಡಿತಿದ್ದಾರೆ ಅಂತ ಮಾಹಿತಿ ಹಂಚಿಕೊಂಡಿದ್ದಾರೆ.

-masthmagaa.com

Contact Us for Advertisement

Leave a Reply