ತೆಲಂಗಾಣ ರಾಜ್ಯಪಾಲರ ರಿಸೈನ್! ಬಿಹಾರದಲ್ಲಿ ಸೀಟು ಹಂಚಿಕೆ ಪ್ರಕ್ರಿಯೆ!

masthmagaa.com:

ಲೋಕಸಭೆ ಚುನಾವಣೆ ಹೊತ್ತಲ್ಲೆ ತೆಲಂಗಾಣ ಗವರ್ನರ್‌ ತಮಿಳಿಸೈ ಸೌಂದರರಾಜನ್‌ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈಗಾಗ್ಲೇ ರಾಷ್ಟ್ರಪತಿ ದ್ರೌಪದಿ ಮುರ್ಮು ಅವ್ರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದು, ಲೋಕಸಭೆ ಚುನಾವಣೆಗೆ ಬಿಜೆಪಿ ಪರ ಸ್ಪರ್ಧೆ ಮಾಡಲಿದ್ದಾರೆ ಎನ್ನಲಾಗ್ತಿದೆ. ಪ್ರಮುಖವಾಗಿ ತಮಿಳುನಾಡು ಅ‌ಥ್ವಾ ಪುದುಚೆರಿಯಿಂದ ಸ್ಪರ್ಧೆ ಮಾಡೊ ಸಾಧ್ಯತೆ ಇದ್ದು, ಬಿಜೆಪಿ ಅಭ್ಯರ್ಥಿಗಳ 3ನೇ ಲಿಸ್ಟ್‌ ನಲ್ಲಿ ಇವ್ರಿಗೆ ಟಿಕೆಟ್‌ ನೀಡೊ ಸಾಧ್ಯತೆ ಇದೆ ಅಂತ ಹೇಳಲಾಗಿದೆ.

ಬಿಹಾರದಲ್ಲಿ NDA ಮೈತ್ರಿಕೂಟದ ಸೀಟು ಹಂಚಿಕೆ ಪ್ರಕ್ರಿಯೆ ಫೈನಲ್‌ ಆಗಿದೆ. ಒಟ್ಟು 40 ಲೋಕಸಭಾ ಕ್ಷೇತ್ರಗಳನ್ನ ಹೊಂದಿರೊ ಬಿಹಾರದ 17 ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ 16 ಕ್ಷೇತ್ರಗಳಲ್ಲಿ ನಿತೀಶ್‌ ಕುಮಾರ್‌ರ ಜೆಡಿಯು ಪಕ್ಷಗಳ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ. ಇನ್ನು 5 ಸ್ಥಾನಗಳಲ್ಲಿ ರಾಮ್‌ ವಿಲಾಸ್‌ ಪಾಸ್ವಾನ್‌ ಅವ್ರ LJP ಪಕ್ಷ ಮತ್ತು ತಲಾ ಒಂದು ಕ್ಷೇತ್ರದಲ್ಲಿ HAM ಹಾಗೂ ಉಪೆಂದ್ರ ಕುಶವಾಹಾ ಅವ್ರ ಪಕ್ಷಗಳು ಸ್ಪರ್ಧೆ ಮಾಡಲಿವೆ. ಅತ್ತ ಈ ಮೈತ್ರಿಗೆ ತತ್ವಿರುದ್ದವಾಗಿ RJD ನಾಯಕ, ಬಿಹಾರದ ಮಾಜಿ DCM ತೇಜಸ್ವಿ ಯಾದವ್‌ ಕೂಡ ದಿಲ್ಲಿಗೆ ಹೋಗಿದ್ದು, ಸೀಟು ಹಂಚಿಕೆ ಸಂಬಂಧ ಕಾಂಗ್ರೆಸ್‌ ನಾಯಕರ ಜೊತೆ ಚರ್ಚೆ ನಡೆಸಲಿದ್ದಾರೆ ಅಂತ ವರದಿಯಾಗಿದೆ. ಅಂದ್ಹಾಗೆ ಬಿಹಾರದ ಒಟ್ಟು 40 ಲೋಕಸಭಾ ಕ್ಷೇತ್ರಗಳಿಗೆ ಏಪ್ರಿಲ್‌ 19 ರಿಂದ ಜೂನ್‌ 1 ರವರೆಗೆ ಏಳು ಹಂತಗಳಲ್ಲಿ ಕೂಡ ಮತದಾನ ನಡೆಯಲಿದೆ.


ಅತ್ತ ಪಶ್ಚಿಮ ಬಂಗಾಳದಲ್ಲಿ ಗವರ್ನರ್‌ CV ಆನಂದ್‌ ಬೋಸ್‌ ʻಲೋಗ್‌ ಸಭಾʼ ಶೀರ್ಷಿಕೆಯಡಿ ಹೊಸ ಪೋರ್ಟಲ್‌ವೊಂದನ್ನ ಸ್ಥಾಪಿಸಿದ್ದಾರೆ. ಸಾರ್ವಜನಿಕರು ಎಲೆಕ್ಷನ್‌ ವೇಳೆ ತಮಗಾದ ಸಮಸ್ಯೆಗಳನ್ನ ಇಮೇಲ್‌ ಮೂಲಕ ಈ ಪೋರ್ಟಲ್‌ನಲ್ಲಿ ತಿಳಿಸಿದ್ರೆ ತಕ್ಷಣವೇ ಪರಿಹಾರ ನೀಡಲು ಈ ಕ್ರಮ ಕೈಗೊಳ್ಳಲಾಗಿದೆ ಅಂತೇಳಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ 420 ಫ್ರಾಡ್‌ಗಳು 400 ಸೀಟು ಗೆಲ್ಲೊದಾಗಿ ಹೇಳ್ತಿದ್ದಾರೆ ಅಂತ ಬಿಜೆಪಿ ವಿರುದ್ದ ಚಿತ್ರ ನಟ ಪ್ರಕಾಶ್‌ ರಾಜ್‌ ವಾಗ್ದಾಳಿ ನಡೆಸಿದ್ದಾರೆ. ಅಲ್ದೇ ಅಬ್‌ ಕೀ ಬಾರ್‌ 400 ಪಾರ್‌ ಅನ್ನೊರು ದುರಹಂಕಾರಿಗಳು ಅಂತ ಪ್ರಕಾಶ್‌ ರಾಜ್‌ ಕಿಡಿಕಾರಿದ್ದಾರೆ.

-masthmagaa.com

Contact Us for Advertisement

Leave a Reply