ಎಲ್ಲಿಗೆ ಬರಬೇಕೋ ಹೇಳಿ? ಗುಂಡನ್ನ ಎದೆಗೆ ಹೊಡೆಸಿಕೊಳ್ಳೋಕೆ: ಭಜರಂಗ್‌ ಪೂನಿಯಾ

masthmagaa.com:

ಲೈಂಗಿಕ ದೌರ್ಜನ್ಯದ ಆರೋಪದ ಮೇಲೆ ಬಿಜೆಪಿ ಸಂಸದ, WFI ಮುಖ್ಯಸ್ಥ ಬ್ರಿಜ್‌ ಭೂಷಣ್‌ ಸಿಂಗ್‌ ವಿರುದ್ದ ಕುಸ್ತಿಪಟುಗಳು ನಡೆಸ್ತಿರೋ ಪ್ರತಿಭಟನೆ ಕಂಟಿನ್ಯೂ ಆಗಿದೆ. ಇನ್ನು ನಿನ್ನೆ ಹೊಸ ಸಂಸತ್‌ ಕಟ್ಟಡದವರೆಗೂ ಪ್ರತಿಭಟನಾ ಮೆರವಣಿಗೆಯನ್ನ ಕುಸ್ತಿಪಟುಗಳು ಹಮ್ಮಿಕೊಂಡಿದ್ರು. ಅವರನ್ನ ದೆಹಲಿ ಪೊಲೀಸರು ಬಂಧಿಸಿ ಈಗ ಎಫ್‌ಐಆರ್‌ ಹಾಕಿದ್ದಾರೆ. ಇನ್ನು ನಿನ್ನೆ ದಿಲ್ಲಿ ಪೊಲೀಸರು ಸರಿಯಾಗಿ ನಡೆಸಿಕೊಂಡಿಲ್ಲ, ದೌರ್ಜನ್ಯ ಮಾಡಿದ್ದಾರೆ ಅಂತ ಆರೋಪ ಕೇಳಿಬಂದಿತ್ತು. ಇದಕ್ಕೆ ತಕ್ಕಂತೆ ಕೆಲ ಫೋಟೋಗಳೂ ವೈರಲ್‌ ಆಗಿತ್ತು. ಈಗ ಈ ಬಗ್ಗೆ ಪ್ರತಿಕ್ರಿಯೆ ಕೊಟ್ಟಿರೋ ಮಾಜಿ ಒಲಂಪಿಯನ್‌ ಅಭಿನವ್‌ ಬಿಂದ್ರಾ, ನನಗೆ ರಾತ್ರಿ ನಿದ್ದೇನೆ ಬರಲಿಲ್ಲ. ಕ್ರೀಡಾಪಟುಗಳಿಗೆ ಈ ರೀತಿ ನಡೆಸಿಕೊಳ್ಳಬಾರದಿತ್ತು, ಕ್ರೀಡಾಪಟುಗಳಿಗೆ ಬೇಕಾದ ಸೇಫ್ಟಿ ಕ್ರಮಗಳನ್ನ ಜಾರಿ ಮಾಡೋಕೆ ನಿಜವಾಗಿಯೂ ಇದು ಒಳ್ಳೇ ಸಮಯ ಅಂತ ಹೇಳಿದಾರೆ. ನೆನ್ನೆ ರಾತ್ರಿ ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆ ಮಾಡೋಕೆ ಪ್ರಯತ್ನಪಟ್ರು ಅಂತ ಒಲಿಂಪಿಕ್‌ ಪದಕ ವಿಜೇತರಾದ ಬಜರಂಗ್‌ ಪೂನಿಯಾ ವಿನೇಶ್‌ ಫೋಗಟ್‌, ಸಂಗೀತಾ ಫೋಗಟ್‌ ಹಾಗೂ ಸಾಕ್ಷಿ ಮಲಿಕ್‌ ಸೇರಿದಂತೆ ಹಲವರ ವಿರುದ್ಧ IPC ಸೆಕ್ಷನ್ 147, 149, 186, 188, 332, 353 PDPP ಕಾಯ್ದೆಯ ಸೆಕ್ಷನ್ 3ರ ಅಡಿಯಲ್ಲಿ ಕೇಸ್‌ ದಾಖಲಿಸಲಾಗಿದೆ ಅಂತ ದೆಹಲಿ ಪೊಲೀಸರು ತಿಳಿಸಿದ್ದಾರೆ. ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಬ್ರಿಜ್‌ ಭೂಷಣ್‌ ವಿರುದ್ಧ ಎಫ್‌ಐಆರ್‌ ದಾಖಲಿಸಲು ದೆಹಲಿ ಪೊಲೀಸರಿಗೆ 7 ದಿನಗಳ ಬೇಕಾಯಿತು. ಆದ್ರೆ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ನಮ್ಮ ವಿರುದ್ಧ ಕೇಸ್‌ ದಾಖಲಿಸಲು 7 ಗಂಟೆಯೂ ಬೇಕಾಗಲಿಲ್ಲ. ಈ ದೇಶದಲ್ಲಿ ಸರ್ವಾಧಿಕಾರ ಆರಂಭವಾಗಿದೆಯೇ? ಅಂತ ಸಾಕ್ಷಿ ಮಲ್ಲಿಕ್‌ ಪ್ರಶ್ನೆ ಮಾಡಿದ್ದಾರೆ. ಇತ್ತ ಇನ್ನೊಂದ್ಕಡೆ ಜಂತರ್​ ಮಂತರ್​ ಹೊರತು ಪಡಿಸಿ ದೆಹಲಿಯ ಸೂಕ್ತ ಪ್ರದೇಶದಲ್ಲಿ ಪ್ರತಿಭಟನೆ ನಡೆಸಲು ಅವಕಾಶ ನೀಡ್ತೀವಿ ಅಂತ ದಿಲ್ಲಿ ಪೊಲೀಸರು ಹೇಳಿದ್ದಾರೆ. ಇನ್ನೊಂದ್ಕಡೆ ಪ್ರತಿಭಟನಾ ನಿರತ ಕುಸ್ತಿಪಟುಗಳ ವಿರುದ್ದ ಮಾಜಿ ಐಪಿಎಸ್‌ ಆಫೀಸರ್‌ Dr NC Asthana ಕೊಲೆ ಬೆದರಿಕೆ ಹಾಕಿದಾರೆ ಅಂತ ದೂರು ಕೇಳಿ ಬಂದಿದೆ. ಪ್ರತಿಭಟನೆಯ ಕುರಿತು ತಮ್ಮ ಟ್ವಿಟ್ಟರ್‌ನಲ್ಲಿ ಬರೆದಿರೋ ಅಸ್ತನಾ, ಪೊಲೀಸರು ಅಗತ್ಯವಿದ್ದರೆ ಶೂಟ್ ಕೂಡ ಮಾಡುತ್ತಾರೆ. ಆತನನ್ನ ಅಂದ್ರೆ ಭಜರಂಗ್‌ ಪೂನಿಯಾನನ್ನ ಈಗ ಕಸದಂತೆ ಎಸೆದು ಬಿಸಾಕಲಾಗಿದೆ ಅಷ್ಟೇ. ಆರ್ಟಿಕಲ್ 129 ಪೊಲೀಸರಿಗೆ ಗುಂಡು ಹಾರಿಸುವ ಹಕ್ಕನ್ನು ನೀಡುತ್ತೆ. ಸರಿಯಾದ ಸಂದರ್ಭಗಳಲ್ಲಿ, ಆ ಆಸೆಯೂ ಈಡೇರುತ್ತೆ. ಪೋಸ್ಟ್‌ಮಾರ್ಟಮ್ ಟೇಬಲ್‌ನಲ್ಲಿ ಮತ್ತೆ ಭೇಟಿಯಾಗೋಣ ಅಂತ ಬರೆದಿದ್ದಾರೆ. ಇದಕ್ಕೆ ಕುಸ್ತಿಪಟು ಭಜರಂಗ್‌ ಪೂನಿಯಾ ಪ್ರತಿಕ್ರಿಯಿಸಿದ್ದಾರೆ. ಈ ಅಧಿಕಾರಿ ನಮ್ಮನ್ನ ಗುಂಡು ಹಾರಿಸ್ತೀವಿ ಅಂತ ಹೆದರಿಸ್ತಿದ್ದಾರೆ. ಡಿಯರ್‌ ಬ್ರದರ್‌, ನಾನು ಗುಂಡನ್ನ ಎದೆಗೆ ಹೊಡೆಸಿಕೊಳ್ಳೋಕೆ ಇಷ್ಟ ಪಡ್ತೇನೆ ಹೊರತು ಹಿಂದೆ ಓಡಿ ಹೋಗೋದಿಲ್ಲ. ಏನಾಗಬೇಕೋ ಅದು ಈಗಲೇ ಆಗಲಿ, ಎಲ್ಲಿಗೆ ಬರಬೇಕೋ ಹೇಳಿ ಅಂತ ಅಕ್ರೋಶ ಹೊರಹಾಕಿದ್ದಾರೆ.

-masthmagaa.com

Contact Us for Advertisement

Leave a Reply