ಬದರಿನಾಥ, ಕೇದಾರನಾಥ ದೇವಾಲಯಗಳ ಜಾಗದಲ್ಲಿ ಮೊದಲು ಬೌದ್ಧ ವಿಹಾರಗಳಿದ್ದವು! ಹೇಳಿದ್ಯಾರು?

masthmagaa.com:

ಬಿಜೆಪಿಯವರು ಪ್ರತಿ ಮಸೀದಿಯಲ್ಲಿ ದೇವಾಲಯವನ್ನ ಹುಡುಕಿದರೆ ಬೇರೆಯವರು ಪ್ರತಿ ದೇವಾಲಯದಲ್ಲಿ ಬೌದ್ಧ ಮಠವನ್ನು ಹುಡುಕಲು ಪ್ರಾರಂಭಿಸುತ್ತಾರೆ ಅಂತ ಸಮಾಜವಾದಿ ನಾಯಕ ಸ್ವಾಮಿ ಪ್ರಸಾದ್ ಮೌರ್ಯ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ. ಉತ್ತರಾಖಂಡದ ಬದರಿನಾಥ, ಕೇದಾರನಾಥ , ಪುರಿಯ ಜಗನ್ನಾಥ , ಕೇರಳದ ಅಯ್ಯಪ್ಪ ದೇವಾಲಯ ಮತ್ತು ಪಂಢರಪುರದ ವಿಠ್ಠಲ ದೇವಾಲಯಗಳು ಬೌದ್ಧ ವಿಹಾರಗ ಅವುಗಳನ್ನ ಕೆಡವಿ ಹಿಂದೂ ದೇವಾಲಯಗಳನ್ನ ಕಟ್ಟಲಾಗಿದ್ದವು. 8ನೇ ಶತಮಾನದವರೆಗೂ ಅವುಗಳು ಬೌದ್ಧ ವಿಹಾರಗಳಾಗಿದ್ದವು ಅನ್ನೋದಕ್ಕೆ ಸಾಕಷ್ಟು ಐತಿಹಾಸಿಕ ಪುರಾವೆಗಳಿವೆ ಅಂತ ಪ್ರಸಾದ್‌ ಮೌರ್ಯ ಹೇಳಿಕೆ ಕೊಟ್ಟಿದ್ದಾರೆ. ಇನ್ನು ನೀವು ಪ್ರತಿ ಮಸೀದಿಯಲ್ಲಿ ದೇವಸ್ಥಾನ ಹುಡುಕಿದ್ರೆ ಪ್ರತಿ ದೇವಾಲಯದಲ್ಲಿ ಬೌದ್ಧ ವಿಹಾರವನ್ನ ಯಾಕೆ ಹುಡುಕಬಾರದು? ಅಂತ ಪ್ರಶ್ನಿಸಿದ್ದಾರೆ. ಬಿಜೆಪಿಯವರು ಮಸೀದಿ-ಮಂದಿರದ ವಿಚಾರ ಎತ್ತುವ ಮೂಲಕ ಷಡ್ಯಂತ್ರ ಹೂಡುತ್ತಿದ್ದು, ಇದಕ್ಕೆ ಅವರು ದುಬಾರಿ ಬೆಲೆ ತೆರಬೇಕಾಗುತ್ತದೆ ಅಂತ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ, ಸನಾತನ ಧರ್ಮವನ್ನ ಮತ್ತೆ ಮತ್ತೆ ಅವಮಾನಿಸೋದು ಸಮಾಜವಾದಿ ಪಕ್ಷ ಮತ್ತು ಅದರ ನಾಯಕರ ಅಭ್ಯಾಸವಾಗಿದೆ ಅಂತ ಕಿಡಿ ಕಾರಿದ್ದಾರೆ. ಇತ್ತ ಬಿಎಸ್‌ಪಿ ನಾಯಕಿ ಮಾಯಾವತಿ ಕೂಡಾ ಮೌರ್ಯ ಹೇಳಿಕೆಯನ್ನ ಟೀಕಿಸಿದ್ದು, ಚುನಾವಣೆಗೂ ಮುನ್ನ ಸಮುದಾಯಗಳನ್ನ ಒಡೆಯುವ ಕೆಲಸವನ್ನು ಮಾಡುತ್ತಿದ್ದಾರೆ. ಇದೊಂದು ರಾಜಕೀಯ ಹೇಳಿಕೆ. ಅವರಿಗೆ ಈ ಬಗ್ಗೆ ಗೊತ್ತಿದ್ದರೆ, ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದಾಗ ಯಾಕೆ ಕೇಳಿಲ್ಲ? ಅಂತ ಪ್ರಶ್ನಿಸಿದ್ದಾರೆ.

-masthmagaa.com

Contact Us for Advertisement

Leave a Reply