ತಾಲಿಬಾನ್‌ ಬಂದಾಗಿನಿಂದ ಭಯೋತ್ಪಾದನೆ ಜಾಸ್ತಿಯಾಗ್ತಿದೆ: ಪಾಕ್‌ ಪಿಎಂ

masthmagaa.com:

ಪಾಕಿಸ್ತಾನದಲ್ಲಿ ಭಯೋತ್ಪಾದಕ ದಾಳಿಗಳು ಜಾಸ್ತಿ ಆಗ್ತಾ ಇರೋ ಬೆನ್ನಲ್ಲೆ, ಪಾಕ್‌ ತಾಲಿಬಾನ್‌ ಮೇಲೆ ಆರೋಪ ಮಾಡಿದೆ. 2021ರಲ್ಲಿ ತಾಲಿಬಾನ್‌ಗಳು ಅಡಳಿತಕ್ಕೆ ಬಂದಾಗಿನಿಂದ ಪಾಕಿಸ್ತಾನದಲ್ಲಿ ಭಯೋತ್ಪಾದಕ ದಾಳಿಗಳು ಹೆಚ್ಚಾಗ್ತಾ ಇವೆ ಅಂತ ಪಾಕ್‌ ಉಸ್ತುವಾರಿ ಪ್ರಧಾನಿ ಅನ್ವರ್‌ ಉಲ್‌ ಹಕ್‌ ಕಾಕರ್‌ ಹೇಳಿದ್ದಾರೆ. ಮಾತು ಮುಂದುವರೆಸಿದ ಅವ್ರು, ʻಪಾಕ್‌ನಲ್ಲಿ ಭಯೋತ್ಪಾದಕ ದಾಳಿಗಳನ್ನ ಕಡಿಮೆ ಮಾಡಿ ಭದ್ರತೆಯನ್ನ ಕಾಪಾಡೋದಕ್ಕೆ, ಅಫ್ಘಾನ್‌ ನಿರಾಶ್ರಿತರನ್ನ ಪಾಕ್‌ನಿಂದ ಗಡಿಪಾರು ಮಾಡಲಾಗ್ತಾ ಇದೆ. ಅಫ್ಘಾನ್‌ ನಿರಾಶ್ರಿತರನ್ನ ಗಡಿಪಾರು ಮಾಡ್ತಿರೋದು, ಪಾಕಿಸ್ತಾನದ ಕೌಂಟರ್‌-ಟೆರರಿಸಮ್‌ ಆ್ಯಕ್ಷನ್‌ʼ ಅಂತ ಹೇಳಿಕೊಂಡಿದ್ದಾರೆ.

-masthmagaa.com

Contact Us for Advertisement

Leave a Reply