ಜಮ್ಮು-ಕಾಶ್ಮೀರದ RSS ನಾಯಕರಿಗೆ ಉಗ್ರರಿಂದ ಬೆದರಿಕೆ! 30 ಜನರ ಹಿಟ್‌ಲಿಸ್ಟ್‌ ರಿಲೀಸ್!

masthmagaa.com:

ಜಮ್ಮು-ಕಾಶ್ಮೀರದಲ್ಲಿರೊ RSS ಪ್ರಮುಖರಿಗೆ ಹಾಗೂ ಹಲವು ಕಾರ್ಯಕರ್ತರಿಗೆ ಸ್ಥಳೀಯ ಭಯೋತ್ಪಾದಕ ಸಂಘಟನೆ TRF ಬೆದರಿಕೆ ನೀಡಿದೆ. ಹಾಗೇ RSSನ 30 ಜನರ ಹೆಸರುಗಳ ಪಟ್ಟಿ ಬಿಡುಗಡೆ ಮಾಡಿದ್ದು, ಇವರೆಲ್ಲರನ್ನ ಟಾರ್ಗೆಟ್‌ ಮಾಡಿರೋದಾಗಿ TRF ಹೇಳಿಕೊಂಡಿದೆ. ಜಮ್ಮು-ಕಾಶ್ಮೀರದ RSSನ ಉಪಾಧ್ಯಕ್ಷರಾದ ಸಂಗೀತಾ ಆನಂದ್‌, ಕರುಣಾ ಚೆಟ್ರಿ ಸೇರಿದಂತೆ ಇತರ ನಾಯಕರ ಹೆಸರುಗಳು ಪಟ್ಟಿಯಲ್ಲಿವೆ. ನಿಮ್ಮ ರಕ್ತವನ್ನ ಹರಿಸದೆ ಬಿಡಲ್ಲ ಅಂತ ಉಗ್ರರು ಬೆದರಿಕೆ ಹಾಕಿದ್ದಾರೆ. ಅಂದ್ಹಾಗೆ ಇತ್ತೀಚೆಗೆ RSS ಮುಖ್ಯಸ್ಥ ಮೋಹನ್‌ ಭಾಗವತ್‌ ಪಾಕಿಸ್ತಾನಕ್ಕೆ ಸ್ವಾತಂತ್ರ್ಯ ಬಂದು 7 ದಶಕಗಳೇ ಕಳೆದ್ರೂ ಅಲ್ಲಿನ ಜನ ಸಂತೋಷವಾಗಿಲ್ಲ. ಭಾರತದಿಂದ ಬೇರೆಯಾಗಿದ್ದು ದೊಡ್ಡ ಪ್ರಮಾದ ಅನ್ನೊ ಭಾವ ಅವ್ರಲ್ಲಿ ಈಗಲೂ ಇದೆ ಅಂತ ಅಂದಿದ್ರು. ಅವರ ಹೇಳಿಕೆ ಬೆನ್ನಲ್ಲೇ ಈ ಬೆದರಿಕೆ ಬಂದಿದೆ.

-masthmagaa.com

Contact Us for Advertisement

Leave a Reply