ಜೈಷ್‌, ಲಷ್ಕರ್‌ ಉಗ್ರರ ಕೈಲಿ ಚೀನಾ ಆಯುಧಗಳು! ಪಾಕ್‌ ಏನ್ಮಾಡ್ತಿದೆ?

masthmagaa.com:

ಕಾಶ್ಮೀರದ ಪೂಂಚ್‌ ಜಿಲ್ಲೆಯ ಉಗ್ರ ದಾಳಿಗೆ ಸಂಬಂಧಿಸಿದಂತೆ ಒಂದೊಂದೇ ವಿಚಾರಗಳು ಬೆಳಕಿಗೆ ಬರ್ತಿವೆ. ಈ ಹಿಂದೆ ದಾಳಿ ನಡೆಸಿದ ಉಗ್ರರು ಅಮೆರಿಕದ ಅಸಾಲ್ಟ್‌ ರೈಫಲ್‌ ಬಳಸಿರೋ ಫೋಟೋಗಳು ವೈರಲ್‌ ಆಗಿದ್ವು. ಇದೀಗ ಅದ್ರ ಜೊತೆ ದಾಳಿಕೋರರು ಚೀನಾ ನಿರ್ಮಿತ ಆಯುಧಗಳು, bodysuit ಕ್ಯಾಮೆರಾಗಳು ಹಾಗೂ ಇತರ ಚೀನಾದ ಸಂಪರ್ಕ ಸಾಧನಗಳನ್ನ ಬಳಸಿದ್ರು ಎನ್ನಲಾಗ್ತಿದೆ. ಗುಪ್ತಚರ ಇಲಾಖೆಗೆ ಬಂದ ಮಾಹಿತಿಗಳಲ್ಲಿ ಜೈಷ್‌ ಹಾಗೂ ಲಷ್ಕರ್‌ ಉಗ್ರರಿಗೆ ಚೀನಾ ವೆಪನ್‌ಗಳು ಸಪ್ಲೈ ಆಗ್ತಿವೇ ಅನ್ನೋ ಸ್ಪೋಟಕ ವಿಚಾರ ಬೆಳಕಿಗೆ ಬಂದಿದೆ. ಚೀನಾ ಪಾಕ್‌ ಆರ್ಮಿಗೆ ನೀಡ್ತಿರೋ ಡ್ರೋನ್‌ಗಳು ಹಾಗೂ ಹ್ಯಾಂಡ್‌ ಗ್ರನೇಡ್‌ಗಳನ್ನ ಸಪ್ಲೈ ಮಾಡ್ತಿದೆ. ಆದ್ರೆ ಇವೆಲ್ಲಾ ಹೇಗೋ ಉಗ್ರ ಸಂಘಟನೆಗಳ ಕೈಗೆ ಸಿಕ್ತಿವೆ. ಇನ್ನು ದಾಳಿ ತನಿಖೆಗಾಗಿ ಪೂಂಚ್‌ ಹಾಗೂ ರಜೌರಿ ಜಿಲ್ಲೆಗಳ ಇಂಟರ್‌ನೆಟ್‌ ಸೇವೆಗಳನ್ನ ಮತ್ತೊಮ್ಮೆ ನಿಲ್ಲಿಸಲಾಗಿದೆ. ಸೋಮವಾರ ಪೂಂಚ್‌ಗೆ ಭೇಟಿ ನೀಡಿದ್ದ ಆರ್ಮಿ ಚೀಫ್‌ ಜನರಲ್‌ ಮನೋಜ್‌ ಪಾಂಡೆ ಈ ಭಾಗದ ಕಾಡುಗಳಲ್ಲಿರೋ ನೈಸರ್ಗಿಕ ಕೇವ್‌ ಅಥವಾ ಗವಿಗಳನ್ನ ನಾಶ ಮಾಡಿ ಅಂತ ಆದೇಶ ನೀಡಿದ್ದಾರೆ. ದಾಳಿಕೋರರು ಇಂತಹ ಗವಿಗಳಲ್ಲಿ ಅಡಗಿರೋ ಚಾನ್ಸಸ್‌ ಇರೋದ್ರಿಂದ ಅವುಗಳನ್ನ ಡಿಸ್‌ಮ್ಯಾಂಟಲ್‌ ಮಾಡಿ ಅಂತ ಕಮ್ಯಾಂಡರ್‌ಗಳಿಗೆ ಆದೇಶ ನೀಡಿದ್ದಾರೆ. ಇನ್ನು ಬುಧವಾರ ರಕ್ಷಣಾ ಸಚಿವ ರಾಜ್‌ನಾಥ್‌ ಸಿಂಗ್‌ ರಜೌರಿ-ಪೂಂಚ್‌ ಸೆಕ್ಟರ್‌ಗೆ ಭೇಟಿ ನೀಡಲಿದ್ದಾರೆ ಎನ್ನಲಾಗ್ತಿದೆ. ಇನ್ನು ಭದ್ರತಾ ಸಿಬ್ಬಂದಿಯಿಂದ ಹಿಂಸೆಗೊಳಗಾಗಿದ್ದಾರೆ ಎನ್ನಲಾದ ಐವರು ಶಂಕಿತರು ಆಸ್ಪತ್ರೆ ಸೇರಿದ್ರು. ಇವರಲ್ಲೊಬ್ಬ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾನೆ. ಇಂಡಿಯನ್‌ ಆರ್ಮಿಯವ್ರು ನಮಗೆ ಚಿತ್ರಹಿಂಸೆ ಕೊಟ್ರು. ನಮ್ಮ ಜ್ಞಾನ ತಪ್ಪೋ ವರೆಗೂ ಗಾಯಗಳಿಗೆ ಖಾರದ ಪುಡಿ ಸವರಿ ಹಿಂಸೆ ನೀಡಿದ್ರು ಅಂತ ಆರೋಪಿಸಿದ್ದಾನೆ. ಇನ್ನೊಂದು ಕಡೆ ನ್ಯಾಷನಲ್‌ ಕಾನ್ಫರೆನ್ಸ್‌ ನಾಯಕ ಹಾಗೂ ಜಮ್ಮು ಕಾಶ್ಮೀರ ಮಾಜಿ ಸಿಎಂ ಫರೂಖ್‌ ಅಬ್ದುಲ್ಲಾ ಕಾಶ್ಮೀರವನ್ನ ಗಾಜಾಗೆ ಹೋಲಿಸಿದ್ದಾರೆ. ಭಾರತ ಪಾಕಿಸ್ತಾನಗಳ ಮಧ್ಯೆ ಮಾತುಕತೆ ನಡೆಯದಿದ್ರೆ ಸಧ್ಯ ಪ್ಯಾಲಸ್ತೀನ್‌ ಹಾಗೂ ಗಾಜಾದಲ್ಲಿರೋ ಪರಿಸ್ಥಿತಿ ಕಾಶ್ಮೀರಕ್ಕೂ ಬರುತ್ತೆ ಅಂದಿದ್ದಾರೆ.

-masthmagaa.com

Contact Us for Advertisement

Leave a Reply