ಟೆಸ್ಲಾ ಕಂಪನಿಯ ಹೊಸ ಹುಮನಾಯ್ಡ್‌ ರೋಬೋಟ್‌ ʻOptimus-Gen 2ʼ ರೆಡಿ! ಏನಿದರ ವಿಶೇಷತೆ?

masthmagaa.com:

ಕಸರತ್ತು ಮಾಡೋ, ಡಾನ್ಸ್‌ ಮಾಡೋ ಮತ್ತು ಮೊಟ್ಟೆಗಳನ್ನ ಕೂಡ ಬೇಯಿಸೋ ಹೊಸ ಹುಮನಾಯ್ಡ್‌ ರೋಬೋಟನ್ನ ಇದೀಗ ಎಲಾನ್‌ ಮಸ್ಕ್‌ ಒಡೆತನದ ಟೆಸ್ಲಾ ಕಂಪನಿ ರೆಡಿ ಮಾಡಿದೆ. Optimus-Gen 2 ಅನ್ನೋ ಆಪ್ಟಿಮಸ್‌ ಹುಮನಾಯ್ಡ್‌ ರೋಬೋಟ್‌ ರೆಡಿ ಮಾಡಿರೋ ಕಂಪನಿ ʻಹೊಸ ರೋಬೋಟ್‌ ನಗರಕ್ಕೆ ಕಾಲಿಟ್ಟಿದೆʼ ಅಂತ ತನ್ನ X ಖಾತೆಯಲ್ಲಿ ಬರೆದುಕೊಂಡಿದೆ. ಇನ್ನು ಈ ರೋಬೋಟ್‌ ಟೆಸ್ಲಾ ನಿರ್ಮಿತ ಹಿಂದಿನ ಹುಮನಾಯ್ಡ್‌ ರೋಬೋಟ್‌ ಮಾಡೆಲ್‌ಗಳಿಗಿಂತ ಹಗುರ ಹಾಗೂ 30% ಫಾಸ್ಟ್‌ ಇದೆ. ವಿಶೇಷ ಅನ್ನೋ ಹಾಗೇ ಇದರಲ್ಲಿ ಟ್ಯಾಕ್‌ಟೈಲ್‌ ಸೆನ್ಸರ್‌ಗಳನ್ನ (tactile sensor) ಅಳವಡಿಸಲಾಗಿದೆ. ಇದ್ರಿಂದ ಈ ರೋಬೋಟ್‌ಗಳು ಮೊಟ್ಟೆಗಳಂತಹ ಬಹಳ ಸೂಕ್ಷ್ಮವಾದ ವಸ್ತುಗಳನ್ನ ಯಾವ್ದೇ ರೀತಿ ಡ್ಯಾಮೇಜ್‌ ಮಾಡದೇ ತಮ್ಮ ಕೈಗಳಲ್ಲಿ ಹಿಡಿದಿಟ್ಟುಕೊಳ್ಳೋ ಸಾಮರ್ಥ್ಯವನ್ನ ಹೊಂದಿರುತ್ತೆ. ಅಲ್ಲದೇ ತಮ್ಮ ಇಡೀ ದೇಹದ ಕಂಟ್ರೋಲ್‌ ಹೊಂದಿದ್ದು, ಸ್ಕ್ವಾಟ್‌ನಂತಹ ಎಕ್ಸರ್ಸೈಸ್‌ ಕೂಡ ಮಾಡುತ್ವೆ ಅಂತ ಟೆಸ್ಲಾ ಹೇಳಿದೆ. ಇನ್ನು ಟೆಸ್ಲಾ ಕಂಪನಿ ಇದುವರೆಗೆ ಡೆಲಿವರಿ ಮಾಡಿರೋ ಎಲ್ಲಾ ಕಾರುಗಳು ಅಂದ್ರೆ ಸುಮಾರು 20 ಲಕ್ಷಕ್ಕೂ ಹೆಚ್ಚು ಟೆಸ್ಲಾ ಕಾರುಗಳ ರಿಪೇರಿಗಾಗಿ ಬುಲಾವ್‌ ನೀಡಿದೆ. ಕಾರುಗಳ ಆಟೋಪೈಲಟ್‌ ಅಂದ್ರೆ ಸ್ವಯಂ ಚಾಲಿತ ವ್ಯವಸ್ಥೆಯಲ್ಲಿ ದೋಷ ಕಂಡುಬಂದಿದೆ. ವಿಶ್ವಾಧ್ಯಂತ ಹಲವು ಅಪಘಾತಗಳು ವರದಿ ಆಗ್ತಿವೆ. ಹಾಗಾಗಿ ಈ ದೋಷವನ್ನ ಸರಿಪಡಿಸೋಕೆ ಟೆಸ್ಲಾ ಮುಂದಾಗಿದೆ.

-masthmagaa.com

Contact Us for Advertisement

Leave a Reply