ಅಮೆರಿಕದಲ್ಲಿ ಹಕ್ಕಿಜ್ವರ ಉಲ್ಬಣ: ಮತ್ತೊಂದು ಪ್ಯಾಂಡಮಿಕ್‌ ಆತಂಕ

masthmagaa.com:

ಆತಂಕಕಾರಿ ಬೆಳವಣಿಗೆಯಲ್ಲಿ ಹಕ್ಕಿ ಜ್ವರ ಅಥ್ವಾ H5N1 ವೈರಸ್‌ ಜಗತ್ತಿನಲ್ಲಿ ಮತ್ತೊಮ್ಮೆ ಪ್ಯಾಂಡಮಿಕ್‌ ಸೃಷ್ಟಿಸೋ ಸಾಧ್ಯತೆ ಇದೆ. ಇದು ಕೋವಿಡ್‌ 19ಗಿಂತ ಸೀವಿಯರ್‌ ಆಗಿ ಜಗತ್ತನ್ನ ಕಾಡಲಿದೆ ಅಂತ ಅಮೆರಿಕದ ತಜ್ಞರು ಅಲರ್ಟ್‌ ನೀಡಿದ್ದಾರೆ. ಇದರ ಬೆನ್ನಲ್ಲೇ ವೈಟ್‌ ಹೌಸ್‌ ಕೂಡ ಇದನ್ನ ಮಾನಿಟರ್‌ ಮಾಡ್ತಿದ್ದೇವೆ ಅಂತೇಳಿದೆ. ಅಮೆರಿಕದಲ್ಲಿ ಈಗ H5N1 ಕೇಸ್‌ಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗ್ತಿವೆ. ಒಟ್ಟು 6 ರಾಜ್ಯಗಳ ಸಾಕು ಪ್ರಾಣಿಗಳು ಹಾಗೂ ಮನುಷ್ಯರಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದೆ. ಅದ್ರಲ್ಲೂ ಸುಮಾರು 12 ಗುಂಪುಗಳ ಹಸುಗಳಲ್ಲಿ, ಅವುಗಳ ಪಾಲಕರಲ್ಲಿ H5N1 ಪಾಸಿಟಿವ್‌ ಬಂದಿದೆ. ಕೆಲವು ಬೆಕ್ಕುಗಳಲ್ಲೂ ಈ ಖಾಯಿಲೆ ಕಾಣಿಸಿಕೊಂಡಿದೆ. ಹಾಗಾಗಿ ಈ ಸೋಂಕು ರೂಪಾಂತರಿಯಾಗ್ತಾ ಬಹಳ ಈಸಿಯಾಗಿ ಮನುಷ್ಯರಿಗೆ ಹರಡ್ತಾ ಇದೆ ಅಂತ ತಜ್ಞರು ಹೇಳಿದ್ದಾರೆ. ಸದ್ಯ ಸಸ್ತನಿಗಳಲ್ಲಿ ಸೋಂಕು ವೇಗವಾಗಿ ಹರಡ್ತಿದ್ದು, ಈ ಖಾಯಿಲೆಗೆ ತುತ್ತಾ ದೋರ ಸಾವಿರ ದರ ಜಾಸ್ತಿ ಇದೆ. ಇದು ರೂಪಾಂತರಗೊಳ್ತಿರೋದ್ರಿಂದ ಕೋವಿಡ್‌ನಂತೆ ಡೆಡ್ಲಿ ಆಗೋ ಲಕ್ಷಣ ತೋರಿಸ್ತಿದೆ ಅಂದಿದ್ದಾರೆ. ಶಾಕಿಂಗ್‌ ವಿಚಾರ ಏನಂದ್ರೆ, ಹಕ್ಕಿ ಜ್ವರದ ನಾರ್ಮಲ್‌ ಮರಣ ಪ್ರಮಾಣ ಕಂಟಿನ್ಯೂ ಆದ್ರೇನೆ ಕೋವಿಡ್‌ಗಿಂತ ಬರೋಬ್ಬರಿ 100% ಡೆಡ್ಲಿ ಆಗೋ ಲಕ್ಷಣ ಕಾಣ್ತಿದೆ ಅಂದಿದ್ದಾರೆ. ಯಾಕಂದ್ರೆ WHO ಪ್ರಕಾರ ಈಗಾಗ್ಲೆ ಇದ್ರ ಮರಣ ದರ 52% ಇದೆ. ಅಂದ್ರೆ 100 ಜನರಿಗೆ ಹಕ್ಕಿ ಜ್ವರ ಕಾಣಿಸಿಕೊಂಡ್ರೆ 52 ಜನ ಪ್ರಾಣ ಕಳ್ಕೊಳ್ತಿದ್ದಾರೆ. 2020ರಲ್ಲಿ H5N1ನ ಹೊಸ ರೂಪಾಂತರಿಗೆ ತುತ್ತಾದೋರ ಪೈಕಿ 30% ಜನ ಅಸುನೀಗಿದ್ರು. ಇದೇ ಕಾರಣಕ್ಕೆ ಈಗ ಅಮೆರಿಕ ಅಲರ್ಟ್‌ನಲ್ಲಿದೆ. ಸೋಂಕು ಹೆಚ್ಚಾದ್ರೆ ಮೊದಲು ಪ್ರಾಣಿಗಳಲ್ಲಿ.. ಅದ್ರಲ್ಲೂ ಕೋಳಿ, ಹಸುಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳೋದ್ರಿಂದ, ಕೋಳಿ ಸಾಕಾಣಿಕೆ ಹಾಗೂ ಡೈರಿ ಇಂಡಸ್ಟ್ರಿ ಮೇಲೆ ದೊಡ್ಡ ಪರಿಣಾಮ ಬೀರುತ್ತೆ ಅಂತ ವಿಶ್ಲೇಷಿಸಲಾಗ್ತಿದೆ. ಇನ್ನು ಇದ್ದಕ್ಕಿದ್ದಂತೆ ಅಮೆರಿಕದಲ್ಲಿ ಈ ರೀತಿ ಹಕ್ಕಿಜ್ವರ ಬಿಗಡಾಯಿಸೋಕೆ ವಲಸೆ ಜಲಪಕ್ಷಿಗಳು.. ಅದ್ರಲ್ಲೂ ಬಾತುಕೋಳಿಗಳು ವಲಸೆ ಬಂದಿರೋದು ಕಾರಣ ಅಂತೇಳಲಾಗ್ತಿದೆ. ಟೆಕ್ಸಾಸ್‌ನ ಕೋಳಿ ಫಾರ್ಮ್‌ ಒಂದರಲ್ಲಿ ಸೋಂಕು ಕಾಣಿಸಿಕೊಂಡಿದ್ದಕ್ಕೆ ಸುಮಾರು 16 ಲಕ್ಷ ಕೋಳಿಗಳನ್ನ ಹತ್ಯೆಮಾಡಲಾಗಿದೆ!

-masthmagaa.com

Contact Us for Advertisement

Leave a Reply