ರುಚಿಯಾದ ಊಟ ಮಾಡಿಲ್ಲ ಅಂತ ತಾಯಿಯನ್ನೇ ಕೊಂದ ಮಗ! ಆಗಿದ್ದೇನು ಗೊತ್ತಾ?

masthmagaa.com:

ರುಚಿಯಾದ ಆಹಾರ ಕೊಡಲಿಲ್ಲವೆಂಬ ಕಾರಣಕ್ಕೆ ಮಗನೊಬ್ಬ ತನ್ನ ತಾಯಿಯನ್ನೇ ಕೊಂದ ವಿಚಿತ್ರ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ. ಕೋಪದ ಭರದಲ್ಲಿ ಮಗ ತನ್ನ ತಾಯಿಯ ಮೇಲೆ ಮಾರಕ ಶಸ್ತ್ರಾಸ್ತ್ರಗಳಿಂದ ಹಲ್ಲೆ ಮಾಡಿದ್ದು ತಾಯಿ ಸ್ಥಳದಲ್ಲೇ ಕುಸಿದು ಸಾವನ್ನಪ್ಪಿದ್ದಾರೆ ಅಂತ ಪೋಲಿಸರು ಹೇಳಿದ್ದಾರೆ. ಹಲ್ಲೆಯ ನಂತರ ಆರೋಪಿ ನಿದ್ದೆ ಮಾತ್ರೆಗಳನ್ನ ನುಂಗಿದ್ದು ಸಂಬಂಧಿಕರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಹೀಗಾಗಿ ಆರೋಪಿಯನ್ನ ಇನ್ನೂ ಅರೆಸ್ಟ್‌ ಮಾಡಿಲ್ಲ ಅಂತ ತಿಳಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದೆ.

-masthmagaa.com

Contact Us for Advertisement

Leave a Reply