ಅಜಿತ್‌ಕುಮಾರ್‌ ನಟನೆಯ ಸಿನಿಮಾ ಶೂಟಿಂಗ್‌ ವೇಳೆ ಆರ್ಟ್‌ ಡೈರೆಕ್ಟರ್‌ ನಿಧನ !

masthmagaa.com:

ಅಜಿತ್​ ಕುಮಾರ್​ ನಟಿಸುತ್ತಿದ್ದ ಹೊಸ ಮೂವಿ ಶೂಟಿಂಗ್​ ಸೆಟ್‌ನಲ್ಲಿ ಒಂದು ದುರಂತ ನಡೆದಿದೆ. ‘ವಿದಾಮುಯರ್ಚಿ’ ಸಿನಿಮಾಗೆ ಆರ್ಟ್‌ ಡೈರೆಕ್ಟರ್‌ ಆಗಿದ್ದ ಮಿಲನ್​ ಫರ್ನಾಂಡಿಸ್​ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಭಾನುವಾರ (ಅಕ್ಟೋಬರ್​ 15) ಅವರು ಇಹಲೋಕ ತ್ಯಜಿಸಿದ್ದಾರೆ ಅನ್ನೋದು ತಿಳಿದುಬಂದಿದೆ. ಈ ಸಿನಿಮಾವನ್ನು ಖ್ಯಾತ ನಿರ್ಮಾಣ ಸಂಸ್ಥೆಯಾದ ‘ಲೈಕಾ ಪ್ರೊಡಕ್ಷನ್ಸ್​’ ಪ್ರೊಡ್ಯೂಸ್‌ ಮಾಡ್ತಿದ್ದಾರೆ. ಮಿಲನ್​ ಫರ್ನಾಂಡಿಸ್​ ಅವರ ನಿಧನದ ಸುದ್ದಿಯನ್ನು ಲೈಕಾ ಪ್ರೊಡಕ್ಷನ್ಸ್​ ತಿಳಿಸಿದೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಅಂತ ಚಿತ್ರತಂಡದವರು ಪ್ರಾರ್ಥಿಸಿದ್ದಾರೆ.

“‘ನಮ್ಮ ಕಲಾ ನಿರ್ದೇಶಕ ಮಿಲನ್​ ಫರ್ಮಾಂಡಿಸ್​ ಅವರ ನಿಧನಕ್ಕೆ ಸಂತಾಪಗಳು. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬದವರಿಗೆ ಮತ್ತು ಆಪ್ತರಿಗಾಗಿ ನಾವು ದೇವರಲ್ಲಿ ಪ್ರಾರ್ಥಿಸುತ್ತೇವೆ” ಅಂತ ಲೈಕಾ ಪ್ರೊಡಕ್ಷನ್ಸ್​ ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಮಾಡಿದೆ.

-masthmagaa.com

Contact Us for Advertisement

Leave a Reply