ಜಪಾನ್‌ – ಭಾರತ ಇಂಡೋ ಫೆಸಿಫಿಕ್‌ ಭಾಗದ ಎರಡು ಆಧಾರ ಸ್ತಂಭಗಳು: ಮೋದಿ

masthmagaa.com:

ಕ್ವಾಡ್‌ ರಾಷ್ಟ್ರಗಳ ಸಭೆ ಹಾಗೂ ಇನ್ನಿತರ ದ್ವಿಪಕ್ಷೀಯ ಒಪ್ಪಂದಗಳಿಗಾಗಿ ಎರಡು ದಿನಗಳ ಜಪಾನ್‌ ಪ್ರವಾಸ ಕೈಗೊಂಡಿರುವ ಪ್ರಧಾನಿ ಮೋದಿ ಇಂದು ರಾಜಧಾನಿ ಟೋಕಿಯೋದಲ್ಲಿ ಲ್ಯಾಂಡ್‌ ಆಗಿದ್ದಾರೆ. ಪ್ರಧಾನಿಯಾದ ಮೇಲೆ ಕಳೆದ 8 ವರ್ಷಗಳಿಂದ ಜಪಾನ್‌ಗೆ ಮೋದಿಯವರು ನೀಡುತ್ತಿರುವ 5ನೇ ಭೇಟಿ ಇದಾಗಿದೆ. ಈ ವೇಳೆ ಜಪಾನ್‌ ಪ್ರಧಾನಿ ಫಿಮಿಯೋ ಕಿಶಿದ ಹಾಗೂ ಇನ್ನಿತರ ಅಧಿಕಾರಿಗಳು ಹಾಗೂ ಭಾರತ ಮೂಲದ ಜಪಾನ್‌ ನಿವಾಸಿಗಳಿಂದ ಪ್ರಧಾನಿ ಮೋದಿಗೆ ಭವ್ಯ ಸ್ವಾಗತ ನೀಡಲಾಗಿದೆ. ಈ ಬಗ್ಗೆ ಮಾತನಾಡಿರೋ ಮೋದಿ, ಜಪಾನ್‌ ಹಾಗೂ ಭಾರತ ಎರಡೂ ಸಹ ಇಂಡೋ – ಫೆಸಿಫಿಕ್‌ ಭಾಗದಲ್ಲಿನ ಭದ್ರತೆ ಹಾಗೂ ಸಹಕಾರದ ಎರಡು ಪ್ರಮುಖ ಆಧಾರ ಸ್ತಂಭಗಳು. ಭಾರತ ಹಾಗೂ ಜಪಾನ್‌ ನಡುವಿನ 70 ವರ್ಷಗಳ ಸಂಬಂಧ ಮಹತ್ವದ್ದಾಗಿತ್ತು ಅಂತ ಹೇಳಿದ್ದಾರೆ. ಅಲ್ಲದೇ ಜಪಾನ್‌ನಲ್ಲಿರೋ ಭಾರತೀಯರು ಹಲವಾರು ಕ್ಷೇತ್ರಗಳಲ್ಲಿ ತಮ್ಮ ಕೊಡುಗೆಯನ್ನ ನೀಡಿದ್ದಾರೆ ಅವರಿಗೆಲ್ಲಾ ಥ್ಯಾಂಕ್ಸ್‌ ಅಂತ ಧನ್ಯವಾದ ತಿಳಿಸಿದ್ರು.

-masthmagaa.com

Contact Us for Advertisement

Leave a Reply