ಅಧಿಕಾರಿಗಳ ಕಾರ್‌ಗೆ ಆರ್ಥಿಕ ಮಿತಿ ಹೆಚ್ಚಿಸಿದ ಸರ್ಕಾರ!

masthmagaa.com:

ಹೊಸ ಸರ್ಕಾರಿ ವಾಹನ ಖರೀದಿಗೆ ನಿಗದಿಪಡಿಸಲಾಗಿದ್ದ ಆರ್ಥಿಕ ಮಿತಿಯನ್ನ ರಾಜ್ಯ ಸರ್ಕಾರ ಹೆಚ್ಚಿಸಿದೆ. ಸಚಿವರು, ಸಂಸದರು, ಪ್ರಧಾನ ಕಾರ್ಯದರ್ಶಿ, ಇಲಾಖೆಯ ಮುಖ್ಯಸ್ಥರು, ಡಿಸಿ, SP, ಜಿಲ್ಲಾ ನ್ಯಾಯಾಧೀಶರು ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳಿಗೆ ಹೊಸ ಸರ್ಕಾರಿ ವಾಹನ ಖರೀದಿಗೆ ಆರ್ಥಿಕ ಮಿತಿಯನ್ನ ಏರಿಕೆ ಮಾಡಲಾಗಿದೆ. ಇದ್ರಲ್ಲಿ ಸಚಿವರು ಮತ್ತು ಸಂಸದರಿಗೆ ಈ ಹಿಂದೆಯಿದ್ದ 23 ಲಕ್ಷ ಮಿತಿಯಿಂದ 26 ಲಕ್ಷಕ್ಕೆ ಏರಿಕೆ ಮಾಡಿದ್ರೆ, ಡಿಸಿ, ಎಸ್‌ಪಿಗಳಿಗೆ 9 ಲಕ್ಷದದಿಂದ 18 ಲಕ್ಷ ರೂಪಾಯಿಗೆ ಏರಿಕೆ ಮಾಡಲಾಗಿದೆ.

-masthmagaa.com

Contact Us for Advertisement

Leave a Reply