ರಾಜ್ಯದಲ್ಲಿ ಬೇಳೆಕಾಳುಗಳ ಬೆಲೆಯಲ್ಲಿ ಭಾರಿ ಏರಿಕೆ!

masthmagaa.com:

ರಾಜ್ಯದಲ್ಲಿ ಕಳೆದ ವಾರದಿಂದ ತೊಗರಿ, ಉದ್ದು, ಹೆಸರು ಬೇಳೆ ಸೇರಿದಂತೆ ಹಲವಾರು ಅಗತ್ಯ ಧಾನ್ಯ ಕಾಳು ಹಾಗೂ ಬೇಳೆಗಳ ಬೆಲೆ ಕೆಜಿಗೆ ಕನಿಷ್ಠ 25 ರೂಪಾಯಿ ಏರಿಕೆಯಾಗಿದೆ. ಈಗಾಗಲೇ ವಿದ್ಯುತ್‌ ದರ, ತರಕಾರಿ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಸಾರ್ವಜನಿಕರ ಜೇಬಿಗೆ ಮೇಲಿಂದ ಮೇಲೆ ಕತ್ತರಿ ಬೀಳುತ್ತಿದೆ. ಕಳೆದ ವಾರ 120 ರೂಪಾಯಿ ಇದ್ದ ತೊಗರಿ ಬೇಳೆ ದರ ಇದೀಗ 160 ರೂಪಾಯಿ ತಲುಪಿದೆ. ಇದರೊಂದಿಗೆ ಉದ್ದಿನ ಬೇಳೆ, ಹೆಸರು ಕಾಳು ಬೇಳೆ, ಹಲಸಂದೆ, ಶೇಂಗಾ ಹಾಗೂ ಹುರಳಿ ಕಾಳುಗಳ ಬೆಲೆ ಕೂಡ ಹೆಚ್ಚಾಗಿದೆ. ಇನ್ನು ಬೆಲೆ ಹೆಚ್ಚಳದಿಂದ ವ್ಯಾಪಾರ ಕಡಿಮೆ ಆಗಿದೆ. ಮೊದಲು ಒಂದು ಕೆಜಿ ತೊಗರಿ ಬೇಳೆ ಕೊಳ್ಳುತ್ತಿದ್ದವರು ಈಗ ಅರ್ಧ ಕೇಜಿಗೆ ಬಂದಿದ್ದಾರೆ. ಹೀಗೇ ಎಲ್ಲ ಬೇಳೆ-ಕಾಳುಗಳ ಬೆಲೆ ಹೆಚ್ಚಾಗಿರೋ ಕಾರಣ ಗ್ರಾಹಕರ ಖರೀದಿ ಪ್ರಮಾಣ ಶೇ.50ರಷ್ಟು ಕುಸಿದಿದೆ ಅಂತ ಕಿರಾಣಿ ಅಂಗಡಿಯ ಮಾಲೀಕರೊಬ್ರು ಹೇಳಿದ್ದಾರೆ.

-masthmagaa.com

Contact Us for Advertisement

Leave a Reply