ನೆಟ್ಟಿಗರ ಗಮನ ಸೆಳೆದ ನೆದರ್‌ಲ್ಯಾಂಡ್ಸ್‌ನ ರಿವರ್ಸ್‌ ಸೇತುವೆ! ಏನಿದರ ವಿಶೇಷ?

masthmagaa.com:

ಜಗತ್ತಿನಲ್ಲಿ ಹಲವಾರು ಕಟ್ಟಡ ವಿನ್ಯಾಸಗಳು ತಮ್ಮ ವಿಶಿಷ್ಟ ವಿನ್ಯಾಸದಿಂದ ಜನರನ್ನ ವಿಸ್ಮಯಗೊಳಿಸುತ್ವೆ. ಅಂತದ್ದೇ ವಿಸ್ಮಯಕಾರಿ ಬ್ರಿಡ್ಜ್‌ವೊಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ನೆದರ್‌ಲ್ಯಾಂಡ್ಸ್‌ನಲ್ಲಿರೊ ರಿವರ್ಸ್‌ ಬ್ರಿಡ್ಜ್‌ ಎಲ್ಲರ ಗಮನ ಸೆಳೆದಿದೆ. ನದಿಯ ಮೇಲೆ ನಿರ್ಮಿಸಿಲಾಗಿರೋ 2 ವೇ ರಸ್ತೆ ಬ್ರಿಡ್ಜ್‌ ಇದಾಗಿದೆ. ಆದ್ರೆ ಈ ಬ್ರಿಡ್ಜ್‌ನ ವೈಶಿಷ್ಟ್ಯತೆ ಅಂದ್ರೆ ಮಧ್ಯ ಭಾಗದಲ್ಲಿ ಶಿಪ್‌ಗಳ ಓಡಾಟಕ್ಕೆ ದಾರಿ ಮಾಡಲಾಗಿದೆ. ಹಂಗಂತ ಇದು ಶಿಪ್‌ ಬಂದಾಗ ಓಪನ್‌ ಆಗಿ, ಮತ್ತೆ ಕ್ಲೋಸ್‌ ಆಗೋ ಸೇತುವೆಯಲ್ಲ. ರಸ್ತೆ ಮೇಲೆ ಹಾಗೂ ನೀರಿನಲ್ಲಿ ಏಕಕಾಲಕ್ಕೆ ವಾಹನಗಳು ಹಾಗೂ ಹಡಗುಗಳು ಓಡಾಡುತ್ವೆ. ಈ ಚಿತ್ರ ನೋಡಿದ್ರೆ ಗೊತ್ತಾಗುತ್ತೆ. ಮಧ್ಯ ಭಾಗದ ರಸ್ತೆಯನ್ನ ಅಂಡರ್‌ವಾಟರ್‌ನಲ್ಲಿ ನಿರ್ಮಿಸಲಾಗಿದೆ. ಒನ್‌ ಸೈಡ್‌ನಿಂದ ಬರೊ ವಾಹನಗಳು ನಡುವೆ ಮಾಯವಾಗಿ, ಸ್ವಲ್ಪ ಹೊತ್ತಿನ ನಂತರ ರಸ್ತೆಯ ಮತ್ತೊಂದು ಭಾಗದಲ್ಲಿ ಬರುತ್ವೆ. ಈ ಸೇತುವೆ ಡಿಸೈನ್‌ ನೆಟ್ಟಿಗರನ್ನ ಆಶ್ಚರ್ಯಗೊಳಿಸಿದೆ.

-masthmagaa.com

Contact Us for Advertisement

Leave a Reply