ಯುಕ್ರೇನ್‌ನಲ್ಲಿ ಶೀಘ್ರ ಅಮೆರಿಕ ರೀ ಎಂಟ್ರಿ! ರಷ್ಯಾ ತೈಲ ಘಟಕ ಬೆಂಕಿಗಾಹುತಿ!

masthmagaa.com:

ಯುಕ್ರೇನ್‌ ರಷ್ಯಾ ಸಂಘರ್ಷ ಉದ್ವಿಗ್ನಗೊಳ್ಳೋ ಸಂದರ್ಭದಲ್ಲೇ ಅಮೆರಿಕಾದ ಉನ್ನತ ಅಧಿಕಾರಿಗಳ ನಿಯೋಗ ಯುಕ್ರೇನ್‌ ರಾಜಧಾನಿ ಕಿಯೇವ್‌ಗೆ ಭೇಟಿ ನೀಡಿದ್ದಾರೆ. ಅಮೆರಿಕಾದ ರಕ್ಷಣಾ ಕಾರ್ಯದರ್ಶಿ ಲಾಯಿಡ್‌ ಆಸ್ಟಿನ್‌, ಸೆಕ್ರಟ್ರಿ ಆಫ್‌ ಸ್ಟೇಟ್‌ ಆಂಟನಿ ಬ್ಲಿಂಕನ್‌ ಹಾಗು ಟಾಪ್‌ ಅಧಿಕಾರಿಗಳು ಯುದ್ದ ಪೀಡಿತ ಯುಕ್ರೇನ್‌ಗೆ ಧಾವಿಸಿದ್ದಾರೆ. ಪೋಲೆಂಡ್‌ ಭೇಟಿ ಬಳಿಕ ಯುಕ್ರೇನ್‌ಗೆ ಬಂದಿರೋ ಅವರು ಅಧ್ಯಕ್ಷ ವೊಲಿಡಿಮಿರ್‌ ಝೆಲೆನ್ಸ್ಕಿ ಜೊತೆ ಮಾತುಕತೆ ನಡೆಸಿದ್ದಾರೆ. ಇನ್ನು ಇದೇ ವೇಳೆ ನಿರೀಕ್ಷೆಯಂತೆ ಯುಕ್ರೇನ್‌ಗೆ ಆರ್ಥಿಕ ಸಹಾಯ ನೀಡಲಾಗಿದ್ದು ಸುಮಾರು 71.3 ಕೋಟಿ ಅಂದ್ರೆ ಸುಮಾರು 5300 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಹೆಲ್ಪ್‌ ಪ್ಯಾಕೇಜ್‌ ನೀಡೋದಾಗಿ ಅನೌನ್ಸ್‌ ಮಾಡಿದ್ದಾರೆ ಅಂತ ಮಾಹಿತಿ ಸಿಕ್ಕಿದೆ. ಅಲ್ಲದೇ ಅಮೆರಿಕಾ ಹಾಗು ಯುಕ್ರೇನ್‌ ನಡುವಿನ ಸಹಕಾರವನ್ನ ಮತ್ತಷ್ಟು ಹೆಚ್ಚು ಮಾಡೋ ಬಗ್ಗೆ ಕೂಡ ಚರ್ಚೆ ಮಾಡಿದ್ದು, ಯುಕ್ರೇನ್ ನಲ್ಲಿ ಅಮೆರಿಕಾದ ರಾಜತಾಂತ್ರಿಕ ಕಛೇರಿಯನ್ನ ಮತ್ತೆ ಆರಂಭಿಸೋ ಬಗ್ಗೆ ಚರ್ಚೆ ನಡೆಸಲಾಗಿದೆ. ಅಂದ್ಹಾಗೆ ರಷ್ಯಾ ದಾಳಿ ನಂತರ ಅಮೆರಿಕಾದ ಟಾಪ್‌ ಅಧಿಕಾರಿಗಳು ಯುಕ್ರೇನ್‌ ಅಧ್ಯಕ್ಷರನ್ನ ಭೇಟಿಯಾಗ್ತಿರೋದು ಇದೇ ಮೊದಲು.

ಈ ನಡುವೆ, ರಷ್ಯಾದ ತೈಲ ಸಂಗ್ರಹಗಾರವೊಂದು ಹೊತ್ತಿ ಉರಿದಿದೆ. ರಷ್ಯಾದ ಬ್ರಾನ್ಸ್ಕ್‌ ಪ್ರದೇಶದಲ್ಲರೋ ದುರ್ಜಾಬಾ ತೈಲ ಸಂಗ್ರಹಾಲಯದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಅಪಾರ ಪ್ರಮಾಣದ ಹಾನಿಯಾಗಿದೆ ಅಂತ ಮಾಹಿತಿ ಸಿಕ್ತಾಯಿದೆ. ಆರಂಭಿಕ ಮಾಹಿತಿ ಪ್ರಕಾರ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ಇನ್ನು ಇದು ಯುಕ್ರೇನ್‌ ಗಡಿಗೆ ಸಮೀಪದಲ್ಲೇ ಇರೋದ್ರಿಂದ ಸಹಜವಾಗಿ ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.

-masthmagaa.com

Contact Us for Advertisement

Leave a Reply