ಹೃದಯಾಘಾತದಿಂದ ಜೈಲರ್‌ ಸಿನಿಮಾದ ವಿಲನ್‌ ನಿಧನ !

masthmagaa.com:

ತಮಿಳುನಾಡಿನ ಖ್ಯಾತ ನಟ ಮಾರಿಮುತ್ತು ಅವರು ಹೃದಯಾಘಾತದಿಂದ ಇಂದು (ಸೆಪ್ಟೆಂಬರ್ 8) ಮೃತಪಟ್ಟಿದ್ದಾರೆ. ಜೈಲರ್‌ ಮೂವಿಯಲ್ಲಿ ವಿಲನ್‌ ಆಗಿ  ಮಾರಿಮುತ್ತು ಅವರು ಕಾಣಿಸಿಕೊಂಡಿದ್ರು. ಹೃದಯಾಘಾತ ಆದ ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ರೂ ಕೂಡ ಯಾವುದೇ ಪ್ರಯೋಜನವಾಗಲಿಲ್ಲ. ಇಂದು ಬೆಳಿಗ್ಗೆ (ಸೆಪ್ಟೆಂಬರ್ 8 ) ಚೆನ್ನೈನ ಸ್ಟುಡಿಯೋದಲ್ಲಿ ಟಿವಿ ಶೋದ ಡಬ್ಬಿಂಗ್​ನಲ್ಲಿ ಬ್ಯುಸಿ ಇದ್ರು. ಡಬ್ ಮಾಡ್ತಾ ಇರುವಾಗ್ಲೇ ಕುಸಿದು ಬಿದ್ದಿದ್ದಾರೆ. ಅಲ್ಲೇ ಹತ್ತಿರದಲ್ಲಿರುವ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ರು. ಆದರೆ, ಆಗಲೇ ಅವರು ಮೃತಪಟ್ಟಿದ್ದರು. ಚೆನ್ನೈನಲ್ಲಿರುವ ಅವರ ನಿವಾಸಕ್ಕೆ ಮೃತದೇಹವನ್ನು ಸ್ಥಳಾಂತರಿಸಲಾಗಿದೆ.

-masthmagaa.com

Contact Us for Advertisement

Leave a Reply