ಸರ್ಕಾರಿ ಬಸ್‌ಗಳು ಸಂಚಾರ ಮಾಡದ ಗ್ರಾಮಗಳಿಗಿಲ್ಲ ʻಶಕ್ತಿʼ ಯೋಜನೆ!

masthmagaa.com:

ಕಾಂಗ್ರೆಸ್‌ನ ಪಂಚ ಗ್ಯಾರಂಟಿಗಳಲ್ಲಿ ಒಂದಾದ ʻಶಕ್ತಿʼ ಯೋಜನೆಯ ಅಡಿಯಲ್ಲಿ ಜೂನ್‌ 11ರಿಂದ ರಾಜ್ಯದ ಮಹಿಳೆಯರಿಗೆ ಸರ್ಕಾರಿ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಸರ್ಕಾರ ಸೌಲಭ್ಯ ಕಲ್ಪಿಸಿದೆ. ಆದರೆ ಖಾಸಗಿ ಬಸ್‌ಗಳೇ ಜಾಸ್ತಿಯಿರುವ ಜಿಲ್ಲೆಗಳಲ್ಲಿ, ಗ್ರಾಮೀಣ ಭಾಗಗಳಲ್ಲಿ ಹಾಗೂ ಸರ್ಕಾರಿ ಬಸ್‌ಗಳೇ ಸಂಚಾರ ಮಾಡದ ಪ್ರದೇಶಗಳಲ್ಲಿನ ಮಹಿಳೆಯರಿಗೆ ಈ ಯೋಜನೆ ಸಿಗೋದಿಲ್ಲ. ನಮ್ಮೂರಿಗೆ ಸರ್ಕಾರಿ ಬಸ್ಸೇ ಬರೋದಿಲ್ಲ, ಖಾಸಗಿ ಬಸ್‌ ಮಾತ್ರ ಇರೋದು ಎಲ್ಲಿಗಾದ್ರು ಹೋಗ್ಬೇಕು ಅಂದ್ರೆ ಪ್ರೈವೇಟ್‌ ಗಾಡಿಯಲ್ಲೇ ಹೋಗ್ಬೇಕು. ಹೀಗಾಗಿ ನಮ್ಮಂಥ ಊರಿನ ಮಹಿಳೆಯರಿಗೆ ಫ್ರೀ ಬಸ್‌ ಹೆಂಗ್‌ ಸಿಗುತ್ತೆ ಅಂತ ಚಿತ್ರದುರ್ಗದ ಕೊಣನೂರು ಗ್ರಾಮದ ಮಹಿಳೆಯೊಬ್ರು ಪ್ರಶ್ನಿಸಿದ್ದಾರೆ. ಇನ್ನು ಶಕ್ತಿ ಯೋಜನೆ ಜಾರಿ ಅನೌನ್ಸ್‌ ಆಗ್ತಿದ್ದಂಗೆ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸರ್ಕಾರಿ ಬಸ್‌ಗಳ ಸಂಖ್ಯೆ ಹೆಚ್ಚಿಸಿ ಎಲ್ಲಾ ಮಹಿಳೆಯರಿಗೂ ಫ್ರೀ ಬಸ್‌ ಪ್ರಯಾಣ ಸಿಗೋತರ ಆಗ್ಬೇಕು ಅಂತ ಈ ಭಾಗದ ರಾಜಕೀಯ ಮುಖಂಡರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

-masthmagaa.com

Contact Us for Advertisement

Leave a Reply