ಬ್ರಿಟಿಷ್‌ ಸಾರ್ವಭೌಮದ ಪ್ರಕಾರ ಕಿಂಗ್ ಚಾರ್ಲ್ಸ್‌ ಬರ್ತ್‌ಡೇ ಸೆಲೆಬ್ರೇಶನ್!

masthmagaa.com:

ಬ್ರಿಟನ್‌ ರಾಜ ಮೂರನೇ ಚಾರ್ಲ್ಸ್‌ ಅವರು ಇಂದು ತಮ್ಮ ಜನ್ಮದಿನವನ್ನ ಆಚರಿಸಿಕೊಳ್ತಿದಾರೆ. ಬ್ರಿಟಿಷ್‌ ಸಾರ್ವಭೌಮದಂತೆ ತಮ್ಮ ಅಧಿಕೃತ ಜನ್ಮದಿನವನ್ನ ಇಂದು ಆಚರಣೆ ಮಾಡಿಕೊಳ್ಳುತ್ತಿದ್ದಾರೆ. ಅಂದ್ಹಾಗೆ ರಾಜರು ಎರಡು ಹುಟ್ಟುಹಬ್ಬವನ್ನ ಆಚರಣೆ ಮಾಡುತ್ತಾರೆ. ಒಂದು ಅವರ ಸಾಂಪ್ರದಾಯಕವಾಗಿ ಹುಟ್ಟಿದ ದಿನಾಂಕದ ಆಧಾರದಲ್ಲಿ, ಇನ್ನೊಂದು ಬ್ರಿಟಿಷ್​​ ರಾಜಮನೆತನದ ಪ್ರಕಾರ ನಡೆಯುವ ಹುಟ್ಟು ಹಬ್ಬ. ಹಾಗೇ ನೋಡಿದ್ರೆ ನವಂಬರ್‌ 14 ಚಾರ್ಲ್ಸ್‌ರ ಬರ್ತ್‌ ಡೇಟ್‌. ಸೋ ಈಗ ನಡೀತಾಯಿರೋ ಬರ್ತ್‌ಡೇ ಸೆಲೆಬ್ರೇಶನ್‌ ಸಾರ್ವಜನಿಕವಾಗಿ ಮಾಡಿಕೊಳ್ಳುವ ಆಚರಣೆ ಆಗಿದೆ. ಇದರ ಭಾಗವಾಗಿ ವಾರ್ಷಿಕ ಮಿಲಿಟರಿ ಪರೇಡ್‌ ನಡೆಸಲಾಗ್ತಿದೆ. ಚಾರ್ಲ್ಸ್‌ ಆಳ್ವಿಕೆಯಲ್ಲಿ ಮೊದಲನೆಯ ಹುಟ್ಟುಹಬ್ಬ ನಡೆಯುತ್ತಿದ್ದು ವಿಶೇಷವಾಗಿದೆ. ಇನ್ನು ಈ ಕಾರ್ಯಕ್ರಮದಲ್ಲಿ ಭಾರತೀಯರು ಭಾಗಿಯಾಗಿದ್ದಾರೆ. ವೈದ್ಯರು, ಬ್ಯುಸಿನೆಸ್‌ಮ್ಯಾನ್‌ಗಳು ಹಾಗೂ ಸಮುದಾಯ ನಾಯಕರು ಸೇರಿದಂತೆ 40ಕ್ಕೂ ಹೆಚ್ಚು ಭಾರತೀಯರಿಗೆ ಬ್ರಿಟಿಷ್‌ ಸರ್ಕಾರ ಆಹ್ವಾನ ನೀಡಿದೆ.

-masthmagaa.com

Contact Us for Advertisement

Leave a Reply