ಟ್ವುಟರ್‌ ಹ್ಯಾಂಡಲ್‌ ಚೇಂಜ್‌ ಮಾಡಿದ ಮಸ್ಕ್‌!

masthmagaa.com:

ವಿಶ್ವದ ನಂಬರ್‌ ನಂಬರ್‌ ಒನ್‌ ಶ್ರೀಮಂತ ಹಾಗೂ ಟ್ವಿಟರ್‌ ಬಾಸ್‌ ಎಲಾನ್‌ ಮಸ್ಕ್‌ ಅವ್ರು ಟ್ವಿಟರ್‌ ಲೋಗೋವನ್ನ ʻX’ಗೆ ಚೇಂಜ್‌ ಮಾಡಿ ಸಾಕಷ್ಟು ಸದ್ಧು ಮಾಡಿದ್ದಾರೆ. ಇದೀಗ ಟ್ವಿಟರ್‌ನ ಅಧಿಕೃತ ಹ್ಯಾಂಡಲ್‌ನ್ನೂ X ಅಂತ ಬದಲಾಯಿಸಿದ್ದಾರೆ. ಈ ಕಾರಣಕ್ಕಾಗಿ ಬರೀ x ಅಂತ ಯೂಸರ್‌ನೇಮ್‌ ಹೊಂದಿದ್ದ ಟ್ವಿಟರ್‌ ಬಳಕೆದಾರರೊಬ್ಬರ ಅಕೌಂಟ್‌ನ್ನ ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ X ಅಕೌಂಟ್‌ ಹೊಂದಿದ್ದ ಜೀನ್‌ X ಹ್ವಾಂಗ್‌ ಅನ್ನೋರಿಗೆ ಇಮೇಲ್‌ ಬಂದಿದ್ದು, ನಿಮ್ಮ ಅಕೌಂಟನ್ನ ಕಂಪನಿ ತೆಗೆದುಕೊಂಡಿದೆ ಅಂತ ತಿಳಿಸಲಾಗಿದೆ. ಆದ್ರೆ ಇದಕ್ಕೆ ಹ್ವಾಂಗ್‌ ಅಕ್ಷೇಪ ವ್ಯಕ್ತಪಡಿಸಿದ್ದಾರೆ. ನಾನು x ಅಕೌಂಟ್‌ನ್ನ ಸೇಲ್‌ ಮಾಡೋಕೆ ತಯಾರಿದ್ದೆ, ಆದ್ರೆ ಟ್ವಿಟರ್‌ನವ್ರು ನನ್ನ ಬಳಿ ಈ ಬಗ್ಗೆ ಚರ್ಚೆ ನಡೆಸದೆ ತಮಗೆ ತಾವೇ ತೀರ್ಮಾನ ತಗೊಂಡಿದ್ದಾರೆ ಅಂತ ಹೇಳಿಕೊಂಡಿದ್ದಾರೆ.

-masthmagaa.com

Contact Us for Advertisement

Leave a Reply