ಮಹಾ ಕಳ್ಳರಿಂದ ಟ್ರಾನ್ಸ್‌ಮಿಟರ್‌, ರೇಡಿಯೋ ಟವರ್‌ ಕಳುವು!

masthmagaa.com:

ನಮ್ಮ ದೇಶದಲ್ಲಿ ಕಳ್ಳರಿದ್ರೆ ಅಮೆರಿಕದಲ್ಲಿ ಮಹಾ ಕ‍ಳ್ಳರಿದ್ದಾರೆ ಸ್ವಾಮಿ. ಯಾಕಂದ್ರೆ ಬರೋಬ್ಬರಿ 200 ಅಡಿ ಉದ್ದದ ರೇಡಿಯೋ ಟವರ್‌ ಹಾಗೂ ಟ್ರಾನ್ಸ್‌ಮೀಟರ್‌ನ್ನೇ ಕದ್ಕೊಂಡ್‌ ಹೋಗಿರೋ ಘಟನೆ ಅಮೆರಿಕದಲ್ಲಿ ನಡೆದಿದೆ. ಅಲ್ಲಿನ ಆಲಬಾಮ ರಾಜ್ಯದ ಜಾಸ್ಪರ್‌ ಅನ್ನೋ ಪುಟ್ಟ ನಗರ ಒಂದ್ರಲ್ಲಿ ಈ ಘಟನೆ ನಡೆದಿದೆ. ಜಾಸ್ಟರ್‌ ಜನರಿಗೆ ಈ ರೇಡಿಯೋ ಸ್ಟೇಶನ್‌ ಸುದ್ದಿ ಪ್ರಸಾರ ಮಾಡ್ತಿತ್ತು. ಆದ್ರೆ ಕಳ್ಳರು ಫೆಬ್ರುವರಿ 2 ರಂದು ಸುಮಾರು 83ಲಕ್ಷ ಬೆಲೆಯ ಟ್ರಾನ್ಸ್‌ಮಿಟರ್‌, ಟವರ್‌ನ್ನೆ ಕಿತ್ಕೊಂಡು ಪರಾರಿಯಾಗಿದ್ದಾರೆ.

-masthmagaa.com

Contact Us for Advertisement

Leave a Reply